ರಾಗ ಪೀಲು/ಆದಿ ತಾಳ

ದೇವಕಿಕಂದ ಮುಕುಂದ || ಪಲ್ಲವಿ ||

ನಿಗಮೋಧ್ಧಾರ ನವನೀತಚೋರ
ಖಗಪತಿ ವಾಹನ ಜಗದೋಧ್ಧಾರ || ೧ ||

ಶಂಖಚಕ್ರಧರ ಶ್ರೀ ಗೋವಿಂದ
ಪಂಕಜಲೋಚನ ಪರಮಾನಂದ || ೨ ||

ಮಕರಕುಂಡಲಧರ ಮೋಹನವೇಷ
ರುಕುಮಿಣಿ ವಲ್ಲಭ ಪಾಂಡವಪೋಷ || ೩ ||

ಕಂಸಮರ್ದನ ಕೌಸ್ತುಭಾಭರಣ
ಹಂಸವಾಹನ ಪೂಜಿತ ಚರಣ || ೪ ||

ವರವೇಲಾಪುರ ಚೆನ್ನ ಪ್ರಸನ್ನ
ಪುರಂದರವಿಠಲ ಸಕಲ ಗುಣಾಪೂರ್ಣ || ೫ ||

~~~~ * ~~~~

ನಿಗಮೋಧ್ಧಾರ - ದಾನವರು ಕೊಂಡೊಂಯ್ದು ಅಡಗಿಸಿದ್ದ ವೇದಗಳನ್ನು ಮತ್ತೆ ಪಡೆದುಕೊಂಡು ಬಂದು ಲೋಕಕ್ಕೆ ಕೊಟ್ಟವನು (ಮತ್ಸ್ಯಾವತಾರದಲ್ಲಿ).
ಖಗಪತಿವಾಹನ - ಪಕ್ಷಿಗಳಿಗೆ ಒಡೆಯನಂತಿರುವ ಗರುಡನನ್ನೇರಿ ಬರುವವನು.
ಹಂಸವಾಹನಪೂಜಿತ - ಹಂಸವಾಹನನೆಂದರೆ ಬ್ರಹ್ಮ ; ಅವನಿಂದ ಪೂಜಿಸಲ್ಪಟ್ಟವನು.

[ಪುರಂದರ ಸಾಹಿತ್ಯ ದರ್ಶನ - ಸಂಪುಟ ೧]