( ರಾಗ ಮೋಹನ. ಆದಿ ತಾಳ)
ಏನನಿತ್ತು ಮೆಚ್ಚಿಸುವೆನೊ ಏನೊ ವಿಟ್ಟಲ ||ಪ||
ದೀನರಕ್ಷಕನೆ ನಿನ್ನ ಧ್ಯಾನವೀಯೊ ವಿಠಲಯ್ಯ ||ಅ||
ಓದಿ ನಿನ್ನ ಮೆಚ್ಚಿಸುವೆನೆ
ವೇದವ ತಂದಜನಿಗಿತ್ತೆ
ವಾದಿಸಿ ನಿನ್ನ ಮೆಚ್ಚಿಸುವೆನೆ
ಆದಿಶೇಷ ಶಯನನೆ ||
ಆಡಿ ನಿನ್ನ ಮೆಚ್ಚಿಸುವೆನೆ
ಮೃಡನಯ್ಯನಯ್ಯನೆ
ಪಾಡಿ ನಿನ್ನ ಮೆಚ್ಚಿಸುವೆನೆ
ಪವನಜನೊಡೆಯನೆ ||
ಚಿನ್ನವಿತ್ತು ಮೆಚ್ಚಿಸುವೆನೆ
ಸಿರಿದೇವಿಯರಸನೆ
ಪೂರ್ಣಾನಂದಸ್ವಾಮಿ ನೀನೆ
ಪುರಂದರವಿಠಲಯ್ಯ ||
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!