( ರಾಗ ನಾದನಾಮಕ್ರಿಯಾ. ಝಂಪೆ ತಾಳ)

ಏನೆಂದಳಯ್ಯ ಸೀತೆ, ಹನುಮ ನಿನಗೆ
ಏನ್ನುಡಿದಿಹಳು ಪ್ರೀತೆ ||ಪ||

ಚೆನ್ನಿಗ ಚೆಲುವನೆ ಕೇಳೋ , ಜಾನಕಿಯು
ನಿನ್ನ ಬಿಟ್ಟಿರಲಾರಳು
ನಿನ್ನಿರುಳು ನೀ ನೀಲಕುಂತಳೆ ಕನಸಿನಲಿ
ಚೆನ್ನಾಗಿ ನಿಂತಿಹಳೊ ರಾಮ ||

ಸ್ವಾಮಿರಾಯರ ಪಾದವ, ಎಲೆ ಕಪಿಯೆ
ನಾನೆಂತು ಬಿಟ್ಟಿರಲಿ
ದಾನವನ ಶಿರವರಿದು ಲಂಕೆಯ ಪುರವನ್ನು
ದಹನವನು ಮಾಡೆಂದಳೊ ರಾಮ ||

ಎಲ್ಲಿಂದ ಬಂದೆ ಹನುಮ, ನೀನೆಂದ
ಸೊಲ್ಲ ಕೇಳೋ ಪ್ರೇಮ
ವಲ್ಲಭ ಕಾಣದೆ ನಿಮಿಷ ಯುಗವಾಗಿದೆ
ನಿಲ್ಲಲಾರೆ ಎಂದಳು ರಾಮ ||

ಚಿಂತಿಸುತ ಬಡವಾದಳೊ, ಜಾನಕಿಯು
ಕಾಂತೆ ತಾನಾಗಿಹಳೊ
ಅಂತರಂಗದಿ ಅನಂತ ಅನಂತ ಎನುತ
ಭ್ರಾಂತಿಲಿ ಮರುಗುತಿಹಳೊ ರಾಮ||

ಅಂಜನೆಯತನಯ ಕೇಳೋ, ನೀ ಪೋಗೆ
ಕಂಜನಾಭನಿಗೆ ಹೇಳೊ
ಕುಂಜರನ ಕಾಯ್ದ ಶ್ರೀಪುರಂದರವಿಠಲನ್ನ
ಪಂಜರದ ಅರಗಿಣಿ ಎಂದಳು ರಾಮ ||

( ಈ ಹಾಡನ್ನು ದಿವಂಗತ ಮೈಸೂರು ಅನಂತಸ್ವಾಮಿ ಮತ್ತು ಪದ್ಮಾವತಿ ಅವರ ದನಿಯಲ್ಲಿ ಇಲ್ಲಿ ( http://www.kannadaaudio.com/Songs/Bhaavageethe/Tharakka-Bindige-Mysore-Ananthaswamy/Enendhelalayya.ram ) ಕೇಳಿರಿ)