( ರಾಗ ಮಧ್ಯಮಾವತಿ. ಆದಿ ತಾಳ)

ಗೋವಿಂದಾ ನಿನ್ನಾನಂದ ಸಕಲ ಸಾಧನವು ||ಪ||

ಅಣುರೇಣು ತೃಣಕಾಷ್ಟ ಪರಿಪೂರ್ಣ ಗೋವಿಂದ
ನಿರ್ಮಲಾತ್ಮಕನಾಗಿ ಇರುವುದೆ ಆನಂದ ||

ಸೃಷ್ಟಿಸ್ಥಿತಿಲಯಕಾರಣ ಗೋವಿಂದ
ಈ ಪರಿ ಮಹಿಮೆಯ ತಿಳಿಯುವುದೆ ಆನಂದ ||

ಮಂಗಳಮಹಿಮ ಶ್ರೀ ಪುರಂದರವಿಠಲ
ಹಿಂಗದೆ ದಾಸರ ಸಲಹುವದೆ ಆನಂದ ||