ಆನಂದಮಯಗೆ ಚಿನ್ಮಯಗೆ
ಶ್ರೀಮನ್ನಾರಾಯಣಗೆ ಆರತಿ ಎತ್ತಿರೆ||

ವೇದವ ತಂದು ಬೆಟ್ಟವ ಪೊತ್ತು ಧರಣೀಯ
ಸಾಧಿಸಿ ಕಂಭದೊಳುದಿಸಿದಗೆ|
ಭೂದಾನವ ಬೇಡಿ ನೃಪರ ಸಂಹರಿಸಿದ
ಆದಿ ಮೂರುತಿಗೆ ಆರತಿ ಎತ್ತಿರೆ||

ಇಂದುವದನೆ ಸೀತೆ ಸಹಿತಲರಣ್ಯದಿ
ನಂದಗೋಕುಲದಲ್ಲಿ ನಲಿದವಗೆ|
ಮಂದಗಮನೆಯರ ಮುಂದೆ ನಿರ್ವಾಣದಿ
ನಿಂದ ಮೂರುತಿಗೆ ಆರತಿ ಎತ್ತಿರೆ||

ತುರಗವನೇರಿ ದೈತ್ಯರ ಸೀಳಿ ಸುಜನರ
ಪೊರೆವ ಮಂಗಳ ಹಯವದನನಿಗೆ|
ವರದ ಯಾದವಗಿರಿ ಆದಿ ನಾರಾಯಣ
ಚರಣ ಕಮಲಕೆ ಆರತಿ ಎತ್ತಿರೆ||

<b>ಸೂಚನೆ:</b> ಈ ಹಾಡನ್ನು ಹೆಚ್ಚಾಗಿ ಮಧ್ಯಮಾವತಿ ರಾಗದಲ್ಲಿ ಹಾಡುತ್ತಾರೆ.