ಬಾರೋ ಬೇಗ ಬಾರೋ ನೀಲಮೇಘ ವರ್ಣ
ಬಾರೋ ಬೇಗ ಬಾರೋ ವೇಲಾಪುರದ ಚೆನ್ನ|

ಇಂದಿರೆ ರಮಣ ಗೋವಿಂದ ಬೇಗ ಬಾರೋ
ನಂದನಕಂದ ಮುಕುಂದ ಬೇಗ ಬಾರೋ|

ರಂಗ ಉತ್ತುಂಗ ನರಸಿಂಗ ಬೇಗ ಬಾರೋ
ಮಂಗಳ ಮಹಿಮ ಶುಭಾಂಗ ಬೇಗ ಬಾರೋ|
ರುದ್ಧ ಅನಿರುದ್ಧ ನಿರವದ್ಯ ಬೇಗ ಬಾರೋ
ಹದ್ದನೇರಿದ ಸುಪ್ರಸಿದ್ಧ ಬೇಗ ಬಾರೋ||

ಧೀರ ಉದಾರ ಗಂಭೀರ ಬೇಗ ಬಾರೋ
ಹಾರಾಲಂಕಾರ ರಘುವೀರ ಬೇಗ ಬಾರೋ|
ಅಯ್ಯಾ ವಿಜಯ ಸಹಾಯ್ಯ ಬೇಗ ಬಾರೋ
ಉದಯಾದ್ರಿವಾಸ ಹಯವದನ ಬೇಗ ಬಾರೋ||