(ರಾಗ ಶಂಕರಾಭರಣ ಆದಿ ತಾಳ )

ಲಕ್ಷ್ಮೀಕಾಂತ ಬಾರೋ ಶುಭಲಕ್ಷಣವಂತ ಬಾರೋ
ಪಕ್ಷಿವಾಹನವೇರಿದನೆ ಪಾವನಮೂರ್ತಿ ಬಾರೋ ||ಪ ||

ಆದಿಮೂಲ ವಿಗ್ರಹವಿನೋದಿ ನೀನೆ ಬಾರೋ
ಸಾಧುಸಜ್ಜನ ಸತ್ಯಯೋಗಿ(/ಸತ್ಯಯೋನಿ?) ದಾನಿ ನೀನೆ ಬಾರೋ ||

ಗಾಡಿಗಾರ ಕೃಷ್ಣ ನಿನ್ನ ಬೇಡಿಕೊಂಬೆ ಬಾರೋ
ರೂಢ ಮಾತನಾಡಿ ಸರ್ವ ರೂಢಿಗೊಡೆಯ ಬಾರೋ ||

ನಿನ್ನ ಪಾದಂಗಳ ನಾನು ಬಣ್ಣಿಸಿ ಕರೆವೆ ಬಾರೋ
ಪನ್ನಗಶಯನ ಪುರಂದರವಿಠಲ ಬಾರೋ ||