ಕುದುರೆ ಬಂದಿದೆ ಚೆಲುವ ಕುದುರೆ ಬಂದಿದೆ |ಪ|
ವಾದಿರಾಜರಿಗೊಲಿದು ಬಂದು ಸ್ವಾದಿಪುರದಲ್ಲಿ ನಿಂದ|ಅ.ಪ|

ಮುಂಗಾಲು ಕೆದರಿ ಕುಣಿವ ಕುದುರೆ
ಹಿಂಗಾಲಿಲಸುರರ ಒದೆವ ಕುದುರೆ|
ರಂಗನೆಂದರೆ ಸಲಹೊ ಕುದುರೆ
ತುಂಗ ಹಯವದನ ಕುದುರೆ||

ಹಲ್ಲಣದೊಳಗೆ ನಿಲ್ಲದು ಕುದುರೆ
ಬೆಲ್ಲ ಕಡಲೆ ಮೆಲ್ವ ಕುದುರೆ|
ಫುಲ್ಲಭವನಿಗೊರೆದ ಕುದುರೆ
ಚೆಲ್ವ ಹಯವದನ ಕುದುರೆ||

ಸುತ್ತಮುತ್ತಲಾಡುವ ಕುದುರೆ
ಮತ್ತವಾದಿಯ ಗೆಲ್ವ ಕುದುರೆ|
ಶತ್ರುಗಳೆಲ್ಲರ ಬಡಿವ ಕುದುರೆ
ತತ್ವ ಹಯವದನ ಕುದುರೆ||