( ರಾಗ ಮುಖಾರಿ ಅಟತಾಳ)
ಹಾಂಗೆ ಇರಬೇಕು ಸಂಸಾರದಲ್ಲಿ
ಹ್ಯಾಂಗೆ ಬರೆದಿತ್ತೋ ಪ್ರಾಚೀನದಲ್ಲಿ ||
ಪಕ್ಷಿ ಅಂಗಳದಲ್ಲಿ ಬಂದು ಕೂತಂತೆ
ಆ ಕ್ಷಣದಲ್ಲಿ ಹಾರಿ ಹೋದಂತೆ
ನಾನಾ ಪರಿಯಲ್ಲಿ ಸಂತೆ ನೆರೆದಂತೆ
ನಾನಾ ಪಂಥವ ಹಿಡಿದು ಹೋದಂತೆ ||
ವಸ್ತಿಗಾರನು ವಸ್ತಿ ಬಂದಂತೆ
ಹೊತ್ತಾರೆ ಎದ್ದು ಹೊರಟುಹೋದಂತೆ
ಸಂಸಾರವೆಂಬೋ ಪಾಶ ನೀನೇ ಬಿಡಿಸಯ್ಯ
ಕಂಸಾರಿ ಪುರಂದರವಿಠಲರಾಯ ||
( ....
ಆಡುವ ಮಕ್ಕಳು ಮನೆ ಕಟ್ಟಿದರು ಆಟ ಸಾಕೆಂದು ಮುರಿದು ಓಡಿದರು ....)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!