(ರಾಗ ದೇಸ್ / ನಾದನಾಮಕ್ರಿಯಾ ಏಕ ತಾಳ )

ನಾ ಡೊಂಕಾದರೆ ನಿನ್ನ ನಾಮ ಡೊಂಕೆ ವಿಠಲ ||ಪ ||

ನದಿಯು ಡೊಂಕು ಆದರೇನು ಉದಕ ಡೊಂಕೆ ವಿಠಲ ||

ಹಾವು ಡೊಂಕು ಆದರೇನು ವಿಷವು ಡೊಂಕೆ ವಿಠಲ ||

ಪುಷ್ಪ ಡೊಂಕು ಆದರೇನು ಪರಿಮಳ ಡೊಂಕೆ ವಿಠಲ ||

ಆಕಳು ಡೊಂಕು ಆದರೇನು ಹಾಲು ಡೊಂಕೆ ವಿಠಲ ||

ಬಿಲ್ಲು ಡೊಂಕು ಆದರೇನು ಬಾಣ ಡೊಂಕೆ ವಿಠಲ ||

ನಾನು ಹೊಲೆಯನಾದರೆ ನಾಮ ಹೊಲೆಯೆ ವಿಠಲ ||

ಅಜ್ಞನೆಂದು ಕಾಯೊ ಎನ್ನ ಸುಜ್ಞ ಪುರಂದರವಿಠಲ ||