(ರಾಗ ನಾದನಾಮಕ್ರಿಯ ಆದಿ ತಾಳ )
ಮನವ ನಿಲಿಸುವದು ಬಹು ಕಷ್ಟ, ಹರಿದಾಡುವಂಥ
ಮನವ ನಿಲಿಸುವದು ಬಹು ಕಷ್ಟ ||ಪ||
ಕಾಶಿಗ್ಹೋಗಲುಬಹುದು
ದೇಶ ತಿರುಗಲುಬಹುದು
ಆಸೆ ಸುಟ್ಟಂತೆ ಇರಬಹುದು ||೧||
ಜಪವ ಮಾಡಲುಬಹುದು
ತಪವ ಮಾಡಲುಬಹುದು
ಉಪವಾಸ ವ್ರತದಲ್ಲಿರಬಹುದು ||೨||
ಸ್ನಾನ ಮಾಡಲುಬಹುದು
ಮೌನ ಮಾಡಲುಬಹುದು
ಧ್ಯಾನದಿಪುರಂದರವಿಠಲನ ಚರಣದಲಿ ||೩||
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!