(ರಾಗ ಪೀಲು ಆದಿತಾಳ )

ನಾರಾಯಣ ಗೋವಿಂದ ಜಯಜಯ
ಪರತರ ಪರಮಾನಂದ ||ಪ||

ನಕ್ತಂಚರಹರ ನವ್ಯಗುಣಾಕರ
ನಾರದಗಾನವಿಲೋಲ ||

ತ್ರಿಪುರಸಂಹಾರಕ ವಿಪರೀತರೂಪ
ವಿಪುಲಕಲ್ಕ್ಯವತಾರ ||

ದಾಸದಾಸ ಸಿರಿಪುರಂದರವಿಠಲ
ಶೇಷಶಯನ ಸರ್ವೇಶ ||