(ರಾಗ ಸೌರಾಷ್ಟ್ರ ಅಟ ತಾಳ )
ನಡುಮನೆಯೊಳಗೊಂದು ನಾಲ್ಕು ತೆಂಗಿನ ಮರ, ಹೇ ಗಿಣಿಯೇ ಹೇ ಗಿಣಿಯೇ ||ಪ||
ಅದು ತಲೆ ಮೊದಲಿಲ್ಲದೆ ಬೆಳೆದು ಹಣ್ಣಾಯಿತು, ಹೇ ಗಿಣಿಯೇ ಹೇ ಗಿಣಿಯೇ ||ಅ||
ಕಾಲಿಲ್ಲದವ ಹತ್ತಿ ಕೈಯಿಲ್ಲದವ ಕೊಯ್ದ, ಹೇ ಗಿಣಿಯೇ ಹೇ ಗಿಣಿಯೇ, ಅದ
ತಲೆಯಿಲ್ಲದವ ಬಂದು ಹೊತ್ತು ತಂದಿಟ್ಟ, ಹೇ ಗಿಣಿಯೇ ಹೇ ಗಿಣಿಯೇ ||
ಕಣ್ಣಿಲ್ಲದವ ನೋಡಿ ಕೆಂಪಿನ ಹೆಣ್ಣೆಂದ, ಹೇ ಗಿಣಿಯೇ ಹೇ ಗಿಣಿಯೇ, ಅದ
ಬಾಯಿಲ್ಲದವ ತಿಂದು ಬಸಿರೊಳಂಬನೆ ಬಿಟ್ಟ, ಹೇ ಗಿಣಿಯೇ ಹೇ ಗಿಣಿಯೇ ||
ಹಾಲವೃಕ್ಷದ ಮೇಲೆ ಹಕ್ಕಿ ತಾಳಿಹುದು, ಹೇ ಗಿಣಿಯೇ ಹೇ ಗಿಣಿಯೇ, ಅದ
ಹಲಬುತ್ತ ಈರೇಳು ಜಗವ ಮೋಹಿಸುವಂತೆ, ಹೇ ಗಿಣಿಯೇ ಹೇ ಗಿಣಿಯೇ ||
ಬಲೆಯ ಹಾಕಿದರು ಬಲದಿ ದಾಟುವುದಯ್ಯ, ಹೇ ಗಿಣಿಯೇ ಹೇ ಗಿಣಿಯೇ, ಅದ
ಸಲಹುವ ಪುರಂದರ ವಿಠಲರಾಯ ಹೇ ಗಿಣಿಯೇ ಹೇ ಗಿಣಿಯೇ ||
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!