ದಾರಿಯ ತೋರೋ ಗೋಪಾಲ
ವಾರಿಜನಾಭ ಶ್ರೀ ವೈಕುಂಠಲೋಲ|

ಸಿಕ್ಕಿದೆ ಭವಪಾಶದೊಳಗೆ
ಲೆಕ್ಕವಿಲ್ಲದ ಜಂತುಗಳಿಗೆ|
ದಿಕ್ಕೊಬ್ಬರಿಲ್ಲವೋ ಎನಗೆ
ಕಕ್ಕಸ ಕಳೆದು ನಿನ್ನಯ ಪಾದಗಳಿಗೆ||

ಗಜರಕ್ಷಕನು ನೀನೆಂದು
ಅಜರುದ್ರಾದಿಗಳಂದು|
ನಿಜವಾಗಿ ಪೇಳಿದರೆಂದು
ಸುಜನರೊಡೆಯನೆ ಕೇಳಿದೆ ನಾನಿಂದು||

ಸಿರಿ ಹಯವದನನೆ ಬಾರೈ
ಕರೆದೆನ್ನ ದಾರಿಯ ತೋರೈ|
ಪರಮ ಭಕ್ತರಿಗೆ ಇನ್ನಾರೈ
ಪರಮ ಪುರುಷ ನೀನಿಲ್ಲದೆ ಗತಿಯಾರೈ||