ರಾಗ ಆನಂದ ಭೈರವಿ/ಅಟ್ಟ ತಾಳ

ವೇಂಕಟೇಶ ದಯಮಾಡೋ ವೇದವೇದ್ಯನೆ
ಪಂಕಜಾಕ್ಷ ಅಭಯವಿತ್ತು ರಕ್ಷಿಸೆನ್ನ ಬೇಗನೆ || ಪಲ್ಲವಿ ||

ಚಿತ್ತ ಚಂಚಲವ ಬಿಡಿಸೋ ಮತ್ತೆ ಕ್ರೋಧವ ಓಡಿಸೊ
ಭಾಂತಿ ವಿಷಯಂಗಳು ಬೇಡ ಕಂತುಪಿತ ನಾರಾಯಣ || ೧ ||

ಸೃಷ್ಟಿ ಮೂರರೊಳಗೆ ನೀನೆ ಕಷ್ಟಬಡಿಸುವರೇನೊ
ನಷ್ಟ ತನ್ನ ನೋಡಬೇಡೊ ದೃಷ್ಟಿಸಿ ನೋಡೊ ದಯಾಳೊ || ೨ ||

ಭಾಳ ಅಪರಾಧಿ ನಾನು ನಿನ್ನ ಬಳಿಗೆ ಬಂದೆ ನಾನು
ಒಲಿದು ಎನ್ನ ರಕ್ಷಿಸಯ್ಯ ಮೇಲುಗಿರಿ ಪುರಂದರವಿಠಲ || ೩ ||

~~~*~~~

ಸೃಷ್ಟಿ ಮೂರರೊಳಗೆ - ಮೂರು ಲೋಕದಲ್ಲಿ.
ದೃಷ್ಟಿಸಿ ನೋಡೋ - ನನ್ನ ಕಡೆ ಕಣ್ಣನ್ನು ಹರಿಸು.
ಭಾಳ - ಬಹಳ
ಮೇಲುಗಿರಿ - ಏಳು ಬೆಟ್ಟಗಳಲ್ಲಿ ಮೇಲಿನದು, ವೆಂಕಟಾಚಲ.

[ ಪುರಂದರ ಸಾಹಿತ್ಯ ದರ್ಶನ - ಭಾಗ ೧]