ಬಿಡೆನು ಬಿಡೆನು ನಿನ್ನ ಚರಣಕಮಲವ ಎನ್ನ |ಪ|
ಹೃದಯ ಮಧ್ಯದೊಳಿಟ್ಟು ಭಜಿಸುವೆ ಅನುದಿನ|ಅ.ಪ|

ಬಲಿಯ ದಾನವ ಬೇಡಿ ಅಳೆಯೆ ಬ್ರಹ್ಮಾಂಡವ
ನಳಿನೋದ್ಭವ ಬಂದು ಪಾದವ ತೊಳೆಯೆ|
ಉಗುರಿನ ಕೊನೆಯಿಂದ ಉದಿಸಿದಳಾ ಗಂಗೆ
ಹರಿಪಾದ ತೀರ್ಥವೆಂದು ಹರ ಧರಿಸಿದನಾಗ||

ಆ ಪತಿಶಾಪದಿ ಅಹಲ್ಯೆ ಸಾಸಿರ ಯುಗ
ಪಾಷಾಣವಾಗುತ್ತ ಪಥದೊಳಗಿರಲು|
ಶ್ರೀಪತಿ ನಿನ್ನಯ ಶ್ರೀಪಾದ ಸೋಕಲು
ಪಾಪರಹಿತಳಾಗಿ ಪದವಿ ಕಂಡಳಾಗ||

ವಜ್ರಾಂಕುಶಧ್ವಜ ಪದುಮರೇಖೆಗಳಿಂದ
ಪ್ರಜ್ವಲಿಸುವ ನಿನ್ನ ಪಾದ ಪದ್ಮವನು|
ಘರ್ಜಿಸಿ ಭಜಿಸುವೆ ಹಯವದನನೆ ಭವ-
ಜರ್ಜರ ಬಿಡಿಸುವೆನೆಂದು ನಂಬಿಹೆನಾಗಿ||