( ರಾಗ ಮುಖಾರಿ ಅಟತಾಳ)

ತೊಳಲದಿರು ಕಂಡ ಕಡೆಗೆ, ಪರಮಾತ್ಮ-
ನೊಳಕಂಡು ಸುಖಿಸೊ ಮನವೆ ||

ಲಿಪಿಯೊಳಖಿಳವ ಚಿಂತಿಸಿ ಕಡೆ ಕಡೆಗೆ
ಕಪಿಯಂತೆ ಎಡೆಯಾಡದೆ ಮನವೆ
ಗುಪಿತದೊಳಗಿದ್ದಾತ್ಮನ ಧ್ಯಾನಿಸಲು
ಅಪರಿಮಿತ ಸುಖ ಸುಖಿಸುವೆ ಮನವೆ ||

ನಾಗ ನರ ಸುರಲೋಕ ತಿರುತಿರುಗಿ
ಕಾಗೆಯೆಂತೆಡೆಯಾಡದೆ ಮನವೆ
ರಾಗದ್ವೇಷ ತೊಲಗಿಸಿ ಮನದಿ ಮಧು-
ಸೂದನನ ಕಾಣು ಕಂಡ್ಯ ಮನವೆ ||

ಪರರಿಗಿದ ಸೂಚಿಸದಿರೊ ಸಿದ್ಧಾಂತ
ಪರಮ ತತ್ವವನು ತಿಳಿದು ಮನವೆ
ಗುರುಪುರಂದರವಿಠಲನ ಸ್ಮರಿಸಲು
ಸ್ಥಿರವುಳ್ಳ ಮುಕುತಿಯಹುದೊ ಮನವೆ ||