ಇದು ಏನು ನೋಡೇ ,ಇದು ರಂಗನ ಮುಖ, ಚಂದದಿ ಬಾಡೆ ಸಖಿ ||ಪ||
ನೀರೊಳಾಡಿದನೆ , ಬೆನ್ನಲಿ ದೊಡ್ಡ ಭಾರ ಪೊತ್ತನೆ
ಕೋರೆದಾಡೆಯಿಂದ ಸೀಳಿ ಕಶಿಪಿನ
ಕರುಳ ಮಾಲೆಯ ಧರಿಸಿದ ನರಸಿಂಹ ರೂಪನೆ ||
ಧರೆಯನಳೆದ ಪಾದದಲೊಂದು , ಪರಚ್ಛೆಯ ತರಿದ
ನಾರವಸ್ತ್ರವನು ಉಟ್ಟು ನಂದಗೋಕುಲದಲಿ ಮಂ-
ದರಗಿರಿ ಎತ್ತಿ ತಂದ ಬೆಳೆದನಮ್ಮ ||
ಬತ್ತಲೆ ಇರುವ ಉತ್ತಮ ತೇಜಿ ಹತ್ತಿ ತಾನೆ ಮೆರೆವ
ಭಕ್ತವತ್ಸಲ ನಮ್ಮ ಪುರಂದರವಿಠಲನ್ನ
ಚಿತ್ತಕ್ಕೆ ಮೆರೆದಂತೆ ಅತ್ತಾತ ಬಿಡನಮ್ಮ ||
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!