(ರಾಗ ಭೈರವಿ ಛಾಪುತಾಳ )
ಜಯಮಂಗಳಂ ನಿತ್ಯ ಶುಭಮಂಗಳಂ ||ಪ||
ಸಚ್ಚಿದಾನಂದ ಸರ್ವಗುಣಪೂರ್ಣಗೆ
ಅತ್ಯಂತ ಸುಜ್ಞಾನಗಬ್ಜಾಕ್ಷಗೆ
ಮೆಚ್ಚಿ ಗೋಪಿಯರೊಡನೆ ಮನವಿಟ್ಟು ಕೂಡಿದಗೆ
ನಿತ್ಯಕಲ್ಯಾಣ ನಿರ್ದೋಷಗೆ ||
ವ್ಯಾಸಾವತಾರಗೆ ವೇದಉದ್ಧಾರಗೆ
ಸಾಸಿರನಾಮದಾ ಸರ್ವೇಶಗೆ
ವಾಸವಾಗಿದ್ದ ಶ್ರೀವೈಕುಂಠನಿಲಯಗೆ
ಶೇಷಗಿರಿವಾಸ ವೆಂಕಟರಾಯಗೆ ||
ಅಂಬರೀಷನ ಶಾಪ ಪರಿಹರಿಸಿದವಗೆ
ತುಂಬುರು ನಾರದ ಮುನಿವಂದ್ಯಗೆ
ಅಂಬುಜನಾಭಗೆ ಅಜನ ಪೆತ್ತವನಿಗೆ
ಕಂಬುಕಂಧರ ಪುರಂದರವಿಠಲರಾಯಗೆ ||
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!