(ರಾಗ ಪರೋಜ ಆದಿತಾಳ)
ಕೊಡೊ ಕೊಡೊ ಕೊಡೊ ಕೊಡೊ ರಂಗಾ ಕೊಡೊ
ಮಡದಿಯರುಡುವ ಸೀರೆಗಳ ||ಪ||
ಭಂಡುಮಾಡದಿರು ಭಾವಜನಯ್ಯನೆ
ನೀರಜನಾಭನೆ ದಯಮಾಡೋ ||
ಗರತಿಯರೆಲ್ಲರು ಗುಲ್ಲು ಮಾಡುವರು
ದೀನನಾಥನೆ ದಯಮಾಡೊ ||
ಸುರಹೊನ್ನೆಮರವೇರಿ ಅಡಗಿದ ನಿಪುಣನೆ
ಆನಂದಭರಿತನೆ ದಯಮಾಡೊ ||
ಮಾನವ ಸೆಳೆದು ಮಮತೆಲಿ ಬೀಗಿದ
ಪುಂಡರೀಕಾಕ್ಷನೆ ದಯಮಾಡೊ ||
ಪುರಾತನ ಪುರುಷ ಪುಂಡರೀಕಾಕ್ಷನೆ
ಪುರಂದರವಿಠಲನೆ ದಯಮಾಡೊ ||
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!