(ರಾಗ ಶಂಕರಾಭರಣ ಛಾಪುತಾಳ)

ಯಂತ್ರ ದೊರಕಿತು , ಯೋಗ ಯಂತ್ರ ಸಿಕ್ಕಿತು ||ಪ||
ಯಂತ್ರವಾಹಕ ನಾರಾಯಣನ
ಅಂತರಂಗದಿ ನೆನೆಸುವಂಥ ||ಅ||

ಆಸೆಯಿಂದ ಮುಣುಗುವುದಲ್ಲ
ವಾಸುದೇವನೆಂಬುವ ಮಹಾ
ಶಾಶ್ವತವಾದ ದಿವ್ಯನಾಮ ||

ಹಾಸಬಹುದು ಹೊದ್ದಬಹುದು
ಸೂಸಿ ಒಡಲ ತುಂಬಬಹುದು
ಮೋಸಹೋಗಗೊಡುವುದಲ್ಲ
ಶಾಶ್ವತವಾದ ದಿವ್ಯನಾಮ ||

ಓದಿ ಬರೆದು ಸ್ಮರಿಸಿದರೆ
ಒಂದು ಕೋಟಿ ಜಪದ ಫಲವು
ಸಾಧಿಸಲು ಕೈವಲ್ಯಪ್ರಾಪ್ತಿ
ಪುರಂದರವಿಠಲನ ನಾಮ ||