(ರಾಗ ಗಮನಕ್ರಿಯೆ ಮಟ್ಟೆತಾಳ )

ನೀನೇ ಗತಿಯೆನಗೆ ವನಜ ನೇತ್ರೆ ||ಪ||

ಕೈಲಾಸ ಎಂಬೋದು ಕಣ್ಣಿಲಿ ಕಾಣೆ
ಮೈಲುವಾಹನಪಿತ ಎತ್ತ ಪೋದನೊ ಕಾಣೆ ||

ಸತ್ಯಲೋಕವೆಂಬೋದು ಮಿಥ್ಯವಾಗಿತು ಕಾಣೆ
ಎತ್ತ ಪೋದನು ಬ್ರಹ್ಮ ಏನು ಮಾಡಲಿ ಅಮ್ಮ ||

ಸರಸಿಜನಾಭನು ಶರಧಿಯೊಳ್ ಮುಳುಗಿದ
ಪುರಂದರವಿಠಲನ ಕರುಣಕ್ಕೆ ಪಾತ್ರಳೆ ||