( ರಾಗ ನಾಟ )

ಸಕಲ ಸಾಧನಕೆಲ್ಲ ಸಿದ್ಧಿಗೊಳಿಸುವದು
ಭಕುತಿ ಕಾರಣವಲ್ಲದೆ ಬೇರೆ ಸಾಧನವುಂಟೆ
ಯುಕುತಿ ಜನರೆಲ್ಲ ಕೇಳಿ ಇತರ ಸಾಧನಕೆಲ್ಲ
ಭಕುತಿ ಕಾರಣವಲ್ಲದೆ ಬೇರೆ
ಭಕುತಿಕಭಿಮಾನಿ ಭಾರತಿದೇವಿಯರ ಕರುಣ
ಯುಕುತಿ ಸಾಧನವೆಂದು ಮನದಿ ಭಜಿಸಿ
ಅಖಿಲೇಶ ಪುರಂದರವಿಠಲ ತಾನೊಲಿವ ||