ರಾಗ ಆರಭಿ/ತಾಳ ಆದಿ

ಮುರಹರ ನಗಧರ ನೀನೆ ಗತಿ || ಪಲ್ಲವಿ ||
ಧರಣೀ ಲಕ್ಷ್ಮೀಕಾಂತ ನೀನೆ ಗತಿ || ಅನುಪಲ್ಲವಿ ||

ಶಕಟಮರ್ದನ ಶರಣಾಗತವತ್ಸಲ
ಮಕರ ಕುಂಡಲಧರ ನೀನೆ ಗತಿ
ಅಕಳಂಕಚರಿತ ಆದಿನಾರಾಯಣ
ರುಕುಮಿಣಿಪತಿ ಕೃಷ್ಣ ನೀನೆ ಗತಿ || ೧ ||

ಮನೆಮನೆಗಳ ಪೊಕ್ಕು ಕೆನೆ ಹಾಲು
ಬೆಣ್ಣೆಯಪ್ರಮಿತ ಮೆದ್ದ ಹರಿ ನೀನೆ ಗತಿ || ೨ ||

ಪನ್ನಗಶಯನ ಸುಪರ್ಣಗಮನ
ಪೂರ್ಣಚರಿತ ಹರಿ ನೀನೆ ಗತಿ
ಹೊನ್ನ ಹೊಳೆಯಲಿ ಪುರಂದರವಿಠಲ
ಚೆನ್ನ ಲಕ್ಷ್ಮೀಕಾಂತ ನೀನೆ ಗತಿ || ೩ ||

~~~*~~~

ಬೆಣ್ಣೆಯಪ್ರಮೀತ - ಅಪರಿಮಿತನಾಗಿ, ಎಂದರೆ ಬೇಕಾದಷ್ಟು, ಬೆಣ್ಣೆಯನ್ನು.

[ಪುರಂದರ ಸಾಹಿತ್ಯ ದರ್ಶನ - ಭಾಗ ೧]