ಬಾರೋ ಕೃಷ್ಣಯ್ಯ ನಿನ್ನ ಭಕ್ತರ ಮನೆಗೀಗ ರಂಗಯ್ಯ |ಪ|

ಬಾರೋ ನಿನ್ನ ಮುಖ ತೊರೋ ನಿನ್ನ ಸರಿ ಯಾರೋ ಜಗದರಾಶೀಲನೆ|ಅ.ಪ|

ಅಂದುಗೆ ಪಾಡಗವು ಕಾಲಂದುಗೆ ಕಿರು ಗೆಜ್ಜೆ
ಧಿಂಧಿಮಿ ಧಿಮಿಧಿಮಿ ಧಿಮಿ ಎನುತ
ಪೊಂಗೊಳಲನೂದುತ ಬಾರಯ್ಯ|

ಕಂಕಣ ಕರದಲ್ಲಿ ಹೊನ್ನುಂಗುರ ಹೊಳೆಯುತ
ಕಿಂಕಿಣಿ ಕಿಣಿಕಿಣಿ ಕಿಣಿರೆನುತ
ಪೊಂಗೊಳಲನೂದುತ ಬಾರಯ್ಯ|

ವಾಸ ಉಡುಪಿಲಿ ನೆಲೆಯಾದಿಕೇಶವನೆ
ದಾಸ ನಿನ್ನ ಪಾದ ದಾಸ
ದಾಸ ನಿನ್ನ ಪಾದ ದಾಸ ನಿನ್ನ ಪಾದದಾಸ|