ಈ ಲೇಖನ ನಾನು ಸೇರಿದಂತೆ ಬಹಳ ಮಂದಿ ಹಳ್ಳಿಯವರ ನೋವಿನ ಸಂಗತಿ...
ಈ ಲೇಖನ ನಾನು ಸೇರಿದಂತೆ ಬಹಳ ಮಂದಿ ಹಳ್ಳಿಯವರ ನೋವಿನ ಸಂಗತಿ...
ನೀವೇ ನೋಡಿ ನಮಗೆ ಹೇಗೆ ಅನ್ಯಾಯವಾಗುತ್ತಿದೆ ಎಂದು
1.ಹಳ್ಳಿಯವರಿಗಿದ್ದ ೫% ಅಂಕ ತೆಗೆದ್ದಿದ್ದಾರೆ, ಆದರೆ ಇಲ್ಲಿ ಪಾಪ ಓದುವುದಕ್ಕೆ ಆಗುವುದಿಲ್ಲ ಏಕೆಂದರೆ ವಿದ್ಯುತ್ತಿನ ಸಮಸ್ಯೆ . ನಗರದವರು ಎಲ್ಲ ಅಧುನಿಕ ಸೌಲಭ್ಯ ಬಳಸಿಕೊಂಡು ಓದುತಿದ್ದರೆ ಇಲ್ಲಿ ಇನ್ನು ಅಡುಗೂಲಜ್ಜಿ ಕಾಲದ ಪದ್ದತಿಯೇ.
ಇಲ್ಲಿ ನನಗೆ ನಾನು ಶಾಲಾ ದಿನಗಳಲ್ಲಿ ಬರೆದ ಚುಟುಕು ನೆನೆಪಾಗುತ್ತದೆ
ಆಟವ ಆಡುತ್ತೆ ಕ.ಈ.ಬಿ. ಕರೆಂಟು
ಓದೋಕೆ ಬರೆಯೋಕೆ ಚಕ್ಕರ್
ನಾನೇನು ಮಾಡಲಿ ಓದೋಕೆ .
ಆದರೆ ಹತ್ತು ವರ್ಷ ಕಳೆದರು ಇನ್ನು ಏನು ಬದಲಾಗಿಲ್ಲ
2.ಕೆಲಸಕ್ಕೆ ಅಂತ ಹೋದರೆ ಸಂದರ್ಶನದಲ್ಲಿ ಏನೋ ಒಂದು ಚೂರು english ಸರಿಯಿಲ್ಲದಿರುವುದಕ್ಕೆ ಕೆಲಸ ಮಾಡುವ ಕಾರ್ಯಕ್ಷಮತೆ ಇದ್ದ್ದರು ಹೊರಹಾಕುತ್ತಾರೆ ಹಾಗೆ ನೋಡಿದರೆ ನಾವೇ ಈ ನಗರದವರಿಗಿಂತ ಹೆಚ್ಚು ವ್ಯಾಕರಣಬಧ್ಧವಾಗಿ ಇಂಗ್ಲೀಷನ್ನು ಮಾತಾಡೋದು .....
ಇಂಗ್ಲಿಷೆಂಬ ಮಾಯೆಯ ಮಾಯವನ್ನು ಅರಿತರು
ಕನ್ನಡವನ್ನು ಪೂಜಿಸಿ ಎಲ್ಲವನ್ನು ಸಿಧ್ಧಿಸಿದರು
ಕೆಲಸ ಸಿಗುತಿಲ್ಲವೋ ಮಂಕುತಿಮ್ಮ .
ಎಂದು ಡಿ.ವಿ.ಜಿ.ಯವರು ಬರೆಯುತಿದ್ದರೆನೋ
3.ಇನ್ನು ಈ ನಗರದ ಕಾಲೇಜುಗಳಲ್ಲಿ ಹಳ್ಳಿಯವರೆಂದರೆ ಹಿಂಜರಿಯುತ್ತಾರೆ. ನನಗೂ ಈ ಅನುಭವ ಆಗಿತ್ತು ಆದರೆ ನಾವು ಕೆಲವು ಹಳ್ಳಿಯವರೇ ಸೇರಿ ಈ ನಗರದವರಿಗಿಂತ ಬಹಳ ಚೆನ್ನಾಗಿ ನಮ್ಮ ಇವೆಂಟ್ ನಡೆಸಿದೆವು.
ಆದರೆ ಎಲ್ಲ ನಗರಿಗರು ಹೀಗೆ ಅಂತ ನಾನು ಹೇಳಲ್ಲ ಆದರೆ ಬಹು ಪಾಲು ಹೀಗೆ ಇರುತ್ತಾರೆ. ಇದಕ್ಕೆ ನಮ್ಮ ಸರ್ಕಾರ ಹಾಗು ಅದರ ಆಡಳಿತ ಹಾಗು ನಗರದವರ ಮೂಡ ನಂಬಿಕೆಗಳು ಕಾರಣ . ಆದರೆ ಹಳ್ಳಿಯವರನ್ನ ಅಸ್ಪ್ರುಷ್ಯರಂತೆ ನೋಡಬೀಡಿ ಎಂಬುದು ನನ್ನ ಕಳಕಳಿಯ ಬೇಡಿಕೆ ...
ನೀವು ಇದೇ ರೀತಿ ಅನುಭವಕ್ಕೆ ಒಳಗಾಗಿದ್ದಾರೆ ತಿಳಿಸಿ.
ಅಲ್ಲದೆ ನಗರದವರಾಗಿ ಹಳ್ಳಿಯವರಿಗೆ ಪ್ರೋತ್ಸಾಹಿಸಿದ್ದಾರೆ ಅದನ್ನು ತಿಳಿಸಿ.
ತಪ್ಪು ಮಾಡಿದ್ದರೆ ಅದನ್ನು ಒಪ್ಪಿಕೊಳ್ಳಿ.
ವಂದನೆಗಳು
ನಿಮ್ಮ ಪ್ರೀತಿಯ
ಗಣೇಶ
ಪ್ರತಿಕ್ರಿಯೆ (3)