ಸ್ಥಳ : ಜಕ್ಕಸಂದ್ರ, ಸರ್ಜಾಪುರ ರಸ್ತೆ, ಬೆಂಗಳೂರು 

ಸ್ವ್ಯಾತಂತ್ರ್ಯೋತ್ಸವದ  ಆಚರಣೆಗೆ ಶಾಲೆಯ ಬಳಿ ನೆರೆದ ಚಿಣ್ಣರು.ನಿಮ್ಮ ಮನೆಯ ಸುತ್ತ ಮುತ್ತಲೂ ಅನೇಕ ಆಚರಣೆಗಳು ನೆಡೆದಿರ ಬೇಕಲ್ಲಾ? ಅವುಗಳ ಫೋಟೋವನ್ನೂ ಇತರರೊಂದಿಗೆ ಹಂಚಿಕೊಳ್ಳಿ.  ನನ್ನ ಶಾಲಾ ದಿನಗಳ ಆಚರಣೆಯನ್ನ ನೆನಪಿಸಿದ ಚಿತ್ರವಿದು. ಎಲ್ಲ ಇರಲಿ, ಈ ಒಂದು ಐತಿಹಾಸಿಕ ದಿನದಂದು ರಜೆಯನ್ನ ಮನೆಯಲ್ಲಿ ಟೀವಿ ಎಂಬ ಸೋಮಾರಿ ಪೆಟ್ಟಿಗೆಯ ಮುಂದೆ ಕುಳಿತು ಕೊಳೆಯೋದ್ಯಾಕೆ? ಸ್ಯ್ವಾತಂತ್ರ್ಯೋತ್ಸವದ ಆಚರಣೆಗೆ ರಜೆ ಬೇಕೆ? ಈ ದಿನವನ್ನ ನೋಡ್ಲಿಕ್ಕೆ ವರ್ಷಾನುಗಟ್ಟಲೆ ರಜೆಯಿಲ್ಲದೆ ದುಡಿದ ಯೋಧರನ್ನ, ಹೋರಾಟಗಾರರನ್ನ ನೆನೆಯಲಿಕ್ಕೆ ನಮಗ್ಯಾಕೆ ರಜೆ? ನಾವೂ ನಮ್ಮ ಸಮಯವನ್ನ ದೇಶಕ್ಕೆ ಸಮರ್ಪಿಸಿ (ಯಾವುದಾದರೂ ರೀತಿಯಲ್ಲಿ)ಆಚರಣೆಗೆ ಹೊಸ ಅರ್ಥ ಕೊಡ ಬಹುದಲ್ಲವೆ. ಏನಂತೀರಾ?

ನನ್ನ ಇಂತಹ ಕೆಲವೊಂದು ಪ್ರಶ್ನೆಗಳನ್ನ ನನ್ನ ___LINK_OPEN_href="http://platonic.techfiz.info/2008/08/14/why-dont-call-it-a-%e0%a4%b0%e0%a4%be%e0%a4%b7%e0%a5%8d%e0%a4%9f%e0%a5%8d%e0%a4%b0%e0%a4%b5%e0%a5%8d%e0%a4%af%e0%a4%be%e0%a4%aa%e0%a5%80-%e0%a4%ac%e0%a4%82%e0%a4%a6%e0%a5%8d/" target="_blank"___ಇಂಗ್ಲೀಷ್ ಬ್ಲಾಗ್ ನಲ್ಲೂ ಹಂಚಿಕೊಡಿದ್ದೇನೆ. ನೀವೇನಂತೀರಾ ಅಂತ ಕುತೂಹಲ.

ವಂದೇ ಮಾತರಂ.