___LINK_OPEN_href="/try_hard"___try hard  ಕತ್ತಿವರಸೆಯನ್ನು ಕಲಿಯುವುದರಲ್ಲಿ ಆಸಕ್ತನಾಗಿದ್ದ ಯುವಕನೊಬ್ಬ ಝೆನ್ ಗುರುವಿನ ಬಳಿಗೆ ಬಂದ.
"ನಾನು ನಿಮ್ಮ ಬಳಿ ಕತ್ತಿವರಸೆಯ ಕೌಶಲ ಕಲಿಯಬೇಕೆಂದಿದ್ದೇನೆ. ಪರಿಣತಿಯನ್ನು ಪಡೆಯಲು ಎಷ್ಟು ಕಾಲ ಬೇಕಾದೀತು?" ಎಂದು ಕೇಳಿದ.
ತೀರ ಸಹಜವೆಂಬಂತೆ ಗುರು "ಹತ್ತು ವರ್ಷ" ಎಂದ.
"ನನಗೆ ಬೇಗ ಕಲಿಯಬೇಕೆಂದು ಇಷ್ಟ. ಪ್ರತಿ ದಿನವೂ, ದಿನಕ್ಕೆ ಹದಿನೆಂಟು ಗಂಟೆಯ ಕಾಲ ಬೇಕಾದರೆ ಅಭ್ಯಾಸ ಮಾಡಬಲ್ಲೆ. ಹಾಗಾದರೆ ಎಷ್ಟು ಕಾಲ ಹಿಡಿದೀತು?" ಆತುರದಿಂದ  ಯುವಕ ಕೇಳಿದ.
ಗುರು ಒಂದು ಕ್ಷಣ ಯೋಚನೆ ಮಾಡಿ "ಇಪ್ಪತ್ತು ವರ್ಷ" ಎಂದ.

[ನಮ್ಮ ಮಕ್ಕಳ ಶಿಕ್ಷಣದ ಬಗ್ಗೆ ನಾವು ಯೋಚಿಸುವ ರೀತಿಯನ್ನು ನೆನಪಿಸಿಕೊಳ್ಳಿ!]