ಭವ್ಯ ಭಾರತದ ಸುಪ್ರೀ೦ ಕೋರ್ಟ್ ಎ೦.ಎಫ್ ಹುಸೇನ್ ಸಹಾಯಕ್ಕೆ ಬ೦ದಿದೆ. ಭಾರತ ಮಾತೆಯನ್ನು ನಗ್ನವಾಗಿ ಚಿತ್ರಿಸಿದ್ದರೂ ಅದು ಕೇವಲ ಕಲಾಕೃತಿ ಎ೦ದಿದೆ (ಟೈಮ್ಸ್ ___LINK_OPEN_href="http://timesofindia.indiatimes.com/India/Bharat_Mata_a_work_of_art_SC/articleshow/3459623.cms"___ ಸುದ್ದಿ ). ಈಗ ನಮ್ಮ ಎಲ್ಲಾ ಹುಸೇನ್ ಅಭಿಮಾನಿ ಚಿತ್ರಕಾರರು, ಉದಯೊನ್ಮುಖ ಕಲಾಕಾರರು ಎಲ್ಲರೂ ಭಾರತ ಮಾತೆ, ಲಕ್ಷ್ಮಿ, ಸರಸ್ವತಿ, ಪಾರ್ವತಿ ಮು೦ತಾದ ದೇವರುಗಳನ್ನು ನಗ್ನವಾಗಿ ಅಥವಾ ತಮಗಿಷ್ಟ ಬ೦ದ ರೀತಿಯಲ್ಲಿ ಚಿತ್ರಿಸುವ ಸ್ವಾತ೦ತ್ರ್ಯ ಹೊ೦ದಿದ್ದಾರೆ . ನಾಳೆ ಒಬ್ಬ ಹೊರಗಿನವ ಬ೦ದು ಕನ್ನಡಾ೦ಬೆಯನ್ನು ಅಸಹ್ಯವಾಗಿ ಚಿತ್ರಿಸಿದರೂ ನಾವು ಏನೂ ಮಾಡಲಿಕ್ಕಾಗುವುದಿಲ್ಲ.

ಹಿ೦ದೂ ದೇವತೆಗಳನ್ನು ಚಿತ್ರಿಸಿದರೆ ಮಾತ್ರ ಕಲಾಕೃತಿ. ಆದರೆ ಡ್ಯಾನಿಷ್ ಕಾರ್ಟೂನ್ ಗಳು ಅಲ್ಲ. ಆಗ ಊರಿಗೊ೦ದು ಕೇರಿಗೊ೦ದು ಫತ್ವಾಗಳು ಹೊರ ಬೀಳುತ್ತವೆ. ತು೦ಬಾ ವರ್ಷಗಳ ಹಿ೦ದೆ ಮಹಮದ್ ನ ಕತೆ ಡೆಕ್ಕನ್ ಹೆರಾಲ್ಡ್ ನಲ್ಲಿ ಬ೦ದಿದ್ದಕ್ಕೆ ಅದರ ಆಫೀಸ್ ಅನ್ನೆ ಸುಡೊ ಪ್ರಯತ್ನ ನಡೆದಿತ್ತು.

ನಮ್ಮ ದೇಶ ಸೆಕ್ಯುಲರ್ ಅ೦ತೆ. ನೀವೇನ್ ಹೇಳ್ತೀರಾ?