(ನಗೆನಗಾರಿಮನರಂಜನಾಬ್ಯೂರೋ)
ತಮ್ಮರಿಯಲ್ಬದುಕಿನಕಷ್ಟ- ಸಂಕಟಗಳನ್ನು, ಉಪದ್ವಾಪ್ಯಗಳನ್ನುಮರೆಯುವುದಕ್ಕಾಗಿಕ್ಷಣಮಾತ್ರಕ್ಕೆತಮ್ಮೆಲ್ಲಾದುಃಖಗಳಿಂದಬಿಡುವನ್ನುಪಡೆಯುವುದಕ್ಕಾಗಿ, ಹಗಲಿನದುಡಿಮೆಯಿಂದಆದದಣಿವನ್ನುತಣಿಸುವುದಕ್ಕಾಗಿಮನುಷ್ಯನುಮನರಂಜನೆಯನ್ನುಕಂಡುಕೊಂಡಎಂದುಸಣ್ಣಮಗುವಾದರೂಯೋಚಿಸಿಹೇಳಬಹುದು. ಸಣ್ಣಗೆತಮಟೆಯನ್ನುಬಡಿಯುತ್ತಾ, ಬೆಂಕಿಯಸುತ್ತಕುಣಿಯುತ್ತಾ, ಅಜ್ಜ-ಮುತ್ತಜ್ಜನಕಾಲದರಾಜ, ರಾಕ್ಷಸ, ರಾಜಕುಮಾರಿಯರಕಥೆಯನ್ನುಕೇಳುತ್ತಾ, ತಾವೇಕಟ್ಟಿಕೊಂಡಹಾಡುಹಾಡುತ್ತಾಬೆಳೆದವರನ್ನುಕಂಡುನಮ್ಮವಿಜ್ಞಾನಕ್ಕೆಭಾರೀಅನುಕಂಪಮೂಡಿತು. ಮನರಂಜನೆಯಹೆಸರಿನಲ್ಲಿಜನರೇಕಷ್ಟಪಡುವುದುಎಂಥಾಘೋರವಾದಸಂಗತಿಎಂದುಆಲೋಚಿಸಿದವಿಜ್ಞಾನದವಂದಿಗರುಅದಕ್ಕಾಗಿಯೇಎಂದುಟಿವಿಎಂಬಮಾಯಾಪೆಟ್ಟಿಗೆಯನ್ನುಆಕಾಶದಿಂದತಂದುಪ್ರತಿಯೊಬ್ಬರಮನೆಯಲ್ಲಿರಿಸಿದರು. ಹಲವುಮಂದಿಯಮನರಂಜನೆಗಾಗಿಕೆಲವುಮಂದಿದುಡಿಯುವುದನ್ನುಬಹುದೊಡ್ಡಆದರ್ಶವಾಗಿಕಲಿಸಿದರು. ಬೆಳಗೆಲ್ಲಾದುಡಿದುಬಂದವರಮನಸ್ಸಮಾಧಾನಕ್ಕಾಗಿಮನರಂಜನೆನೀಡುವುದುಅನೇಕರಿಗೆಮುಖ್ಯದುಡಿಮೆಯಾಯಿತು.
ಯಾವುದೇಒಳ್ಳೆಯಸಂಗತಿಯೂಕ್ರಮೇಣಸತ್ವವನ್ನುಕಳೆದುಕೊಂಡುಕಾಲಿಗೆಕಚ್ಚಿಕೊಂಡಕೊಚ್ಚೆಯಬಳ್ಳಿಯಾಗುತ್ತದೆಎಂಬುದುಸಾಮ್ರಾಟರಅನುಭವದತಿಳುವಳಿಕೆ. ಅದರಂತೆಯೇಟಿವಿಯಮನರಂಜನೆಯೇಜನರಮನೋವೇದನೆಗೆಕಾರಣವಾಗತೊಡಗಿದ್ದುನಮ್ಮಸಂಸ್ಕೃತಿಚಿಂತಕರು, ಮನಃಶಾಸ್ತ್ರಜ್ಞರುಮಾಡಲುಕೆಲಸವಿಲ್ಲದಾಗಗಂಭೀರವಾಗಿಚಿಂತಿಸಬೇಕಾದಸಂಗತಿ. ನಾನಾವೇಷಗಳಲ್ಲಿ, ನಾನಾಶಕ್ತಿಗಳೊಂದಿಗೆಭೂಮಿಯಮೇಲೆಜನ್ಮವೆತ್ತಿಬರುತ್ತಾದೇವತೆಗಳ, ಮಾನವರನೆಮ್ಮದಿಯನ್ನುಕೆಡಿಸುತ್ತಿದ್ದರಕ್ಕಸರು‘ಧಾರಾವಾಹಿ’ಎಂಬರೂಪಪಡೆದುದಿನದಿನವೂಜನಸಾಗರವನ್ನುದುಃಖದಲ್ಲಿಮುಳುಗಿಸುವಕೆಲಸವನ್ನುನಿರಾಯಾಸವಾಗಿಮಾಡಲುಶುರುಮಾಡಿದರು. ಜನರನ್ನುಒಂದಿಂಚೂಕದಲದಹಾಗೆ, ಒಂಚೂರೂಸ್ವಂತಆಲೋಚನೆಮಾಡದಹಾಗೆ, ತಾಯಿಮಕ್ಕಳಕಡೆಗೆಗಮನಕೊಡದಹಾಗೆ, ತಂದೆಹೊರಗಿನಕೆಲಸಗಳಿಗೆಏಕಾಗ್ರತೆತಾಳದಹಾಗೆ, ಮಕ್ಕಳುತಮ್ಮಕರ್ತವ್ಯವನ್ನುನೆನೆಯದಹಾಗೆಮಾಡುವಸಮ್ಮೋಹನಾಸ್ತ್ರವನ್ನುಈರಕ್ಕಸರುಕಂಡುಕೊಂಡದ್ದುಇಡೀಪುರಾಣಲೋಕದವಿಸ್ಮಯ. ಆದರೆಯಾವಾಗಧರ್ಮಕ್ಕೆತೊಂದರೆಯಾಗುತ್ತದೆಯೋ, ಯಾವಾಗ್ಯಾವಾಗಮನುಷ್ಯನಿಗೆಕಂಟಕಬರುತ್ತದೆಯೋಆಗನಾನುಅವತರಿಸಿಬರುತ್ತೇನೆಎಂದುಶ್ರೀಕೃಷ್ಣಹೇಳಿದ್ದುಸುಳ್ಳಾಗಲಿಲ್ಲ.
ಧಾರಾವಾಹಿಯರಕ್ಕಸನದಾಳಿಯಿಂದಮನುಷ್ಯನನ್ನುರಕ್ಷಿಸಲು‘ರಿಯಾಲಿಟಿಶೋ’ಗಳೆಂಬದೇವದೂತರುಅವತರಿಸಿಬಂದವು. ಪ್ರತಿದಿನಒಂದುಧಾರಾವಾಹಿಮುಗಿದಾಗನಾಳೆಏನಾಗುವುದೋಎಂಬಆತಂಕದಲ್ಲಿಇಡೀದಿನವನ್ನುಕಳೆದುಮರುದಿನಆಧಾರಾವಾಹಿಯಸಮಯಕ್ಕಾಗಿಜಾತಕಪಕ್ಷಿಯಹಾಗೆಕಾಯುತ್ತಿದ್ದವರನ್ನುಆಸಂಕಟದಿಂದಪಾರುಮಾಡಲುಬಂದಂತೆಅವತರಿಸಿದ್ದುರಿಯಾಲಿಟಿಶೋ. ಯಾರೋಕೆಲಸವಿಲ್ಲದವರುಕುಳಿತುಹೆಣೆದುಬಿಸಾಕಿದಕಾಲ್ಪನಿಕಧಾರಾವಾಹಿಗಳನ್ನುನೋಡುವುದಕ್ಕಿಂತನೈಜತೆಯನ್ನುಉಣಬಡಿಸುವಕಾರ್ಯಕ್ರಮಗಳನ್ನುಜನರೂಅಪ್ಪಿಕೊಂಡರು. ಸ್ಟೇಜಿನಮೇಲೆನಿಜವಾಗಿಹಾಡುವುದು, ಕುಣಿಯುವುದು, ಜೋಕುಮಾಡುವುದು, ಒಂದಷ್ಟುಜನರನ್ನುಒಟ್ಟಿಗೇಕೂಡಿಹಾಕಿಅವರಚಲನವಲನವನ್ನು‘ನೈಜ’ಬಿಹೇವಿಯರನ್ನುಲಕ್ಷಾಂತರಜನರುನೋಡುವಏರ್ಪಾಟುಮಾಡುವುದುಇವೆಲ್ಲವನ್ನೂಜನರುಮೆಚ್ಚಿಕೊಳ್ಳತೊಡಗಿದರು. ಇದಕ್ಕೆಕಾರಣ, ಪ್ರತಿದಿನವೂಬಿಡದೆಕಾರ್ಯಕ್ರಮನೋಡಬೇಕುಎಂಬಒತ್ತಡಇಲ್ಲದಿರುವುದು!
ಆದರೆರಕ್ಕಸನಶಕ್ತಿಯನ್ನುಕಡಿಮೆಮಾಡಲುಇನ್ನೂಸಾಧ್ಯವಾಗಿಲ್ಲಎಂಬುದುಹಲವರಅಭುಪ್ರಾಯ. ಮೂಲೆಮನೆಮಾಲಮ್ಮನವರಪ್ರಕಾರ“ಧಾರವಾಹಿಗಳೇಇನ್ನೂಪ್ರಬಲವಾಗಿವೆಯಂತೆ. ಏಕೆಂದರೆಧಾರಾವಾಹಿಯನ್ನುನಿಯಮಿತವಾಗಿನೋಡಬೇಕುಎಂದೇನಿಲ್ಲ. ನೋಡಲುಬಿಟ್ಟುಒಂದುವರ್ಷವಾದನಂತರಮತ್ತೆನೋಡಲುಶುರುಮಾಡಿದರೂಕಥೆಯಲಿಂಕ್ತಪ್ಪಿತುಎನ್ನಲಾಗುವುದಿಲ್ಲ. ಉದಾಹರಣೆಗೆ ಯುವತಿಯೊಬ್ಬಳ ಮದುವೆ ನಿರ್ಧಾರವಾಗುತ್ತದೆ ಎಂದುಕೊಳ್ಳಿ. ನೀವು ಒಂದೆರಡು ವಾರ ನೋಡದಿದ್ದರೆ ಮದುವೆ ನಡೆದು ಹೋಗಿಬಿಡುತ್ತದೆ ಎಂಬ ಆತಂಕ ಪಡುವ ಅಪಾಯವಿಲ್ಲ. ಇನ್ನೇನು ಮದುವೆಗೆ ನಾಲ್ಕು ದಿನ ಇದೆ ಎನ್ನುವಾಗ ಹುಡುಗನ ಕಡೆಯಿಂದ ಒಂದು ತಕರಾರು ಬರುತ್ತದೆ, ಹುಡುಗನ ಮನೆಯಲ್ಲಿ ಯಾರಾದರೊಬ್ಬರು ಕ್ಯಾತೆ ತೆಗೆಯುತ್ತಾರೆ. ಮದುವೆ ಮುಂದೆ ಹೋಗುತ್ತದೆ. ನೀವು ಒಂದುವರ್ಷ ಕಳೆದು ನೋಡಿದರೂ ಹುಡುಗಿಗೆ ಮದುವೆಯಾಗಿರುವುದಿಲ್ಲ. ಮತ್ತೆ ಹೊಸ ಹೊಸ ಸಮಸ್ಯೆಗಳನ್ನು ನಿರ್ದೇಶಕರು ತಮ್ಮ ಮಾಯಾಜಾಲದಿಂದ ಸೃಷ್ಟಿಸಿ ಪಾತ್ರಧಾರಿಗಳನ್ನು ಜೊತೆಗೆ ಧಾರಾವಾಹಿಗಳ ವೀಕ್ಷಕರನ್ನು ಸಿಕ್ಕಿಸಿರುತ್ತಾರೆ. ಆದರೆ ರಿಯಾಲಿಟಿ ಶೋಗಳು ಹಾಗಲ್ಲ ಅವು ಒಂದು ದಿನ ಬಿಟ್ಟರೆ ಅಂದು ಗೆದ್ದದ್ದು ಯಾರು, ಯಾರು ಹೇಗೆ ಫರ್ಫಾರ್ಮ್ ಮಾಡಿದರು, ಯಾರು ಒಳ್ಳೆಯ ಅಂಕಗಳಿಸಿದರು ಎಂಬುದು ತಿಳಿಯುವುದೇ ಇಲ್ಲ.”
ಏನೇ
ಆದರೂ ಇಂದಿನ ಟಿವಿಯ ಯುಗದಲ್ಲಿ ಧಾರಾವಾಹಿ ಎಂಬ ಮಹಾ ಪ್ರಭಾವದಿಂದ ಪ್ರೇಕ್ಷಕರನ್ನು
ಪಾರು ಮಾಡಲು ರಿಯಾಲಿಟಿ ಶೋಗಳೆಂಬ ಆಶಾಕಿರಣಗಳು ಕಾಣಿಸಿಕೊಂಡಿರುವುದು ಸಾಮ್ರಾಟರಿಗೆ
ಸಮಾಧಾನ ತಂದಿದೆ. ಈ
ಬಹುದೊಡ್ಡ ಕ್ರಾಂತಿಯಲ್ಲಿ ತಮ್ಮದೂ ಪಾಲು ಇರಬೇಕೆಂದು ಇಚ್ಚಿಸಿರುವ ಸಾಮ್ರಾಟರು ತಾವೂ
ಒಂದಷ್ಟು ರಿಯಾಲಿಟಿ ಶೋಗಳನ್ನು ಮಾಡಿಕೊಟ್ಟು ಜನರನ್ನು ಧಾರಾವಾಹಿ ಗುಮ್ಮನಿಂದ ಪಾರು
ಮಾಡುವ ಯೋಚನೆಯಲ್ಲಿದ್ದಾರೆ. ಅವರ ತಲೆಯಲ್ಲಿರುವ ಕೆಲವು ರಿಯಾಲಿಟಿ ಶೋಗಳ ಕಲ್ಪನೆಗಳು ಹೀಗಿವೆ: ‘ದಿ ಗ್ರೇಟ್ ಹಾರರ್ ಶೋ’ ಎಂಬ ಭಯಾನಕವಾದ ರಿಯಾಲಿಟಿ ಶೋ. ಇದನ್ನು ಕಂಡು ಬೆಚ್ಚದವರು ಯಾರೂ ಇರಬಾರದು! ಅನೇಕ ಚಾನೆಲ್ಲುಗಳು ಬಳಸಿ ಬಳಸಿ ಸೊರಗಿ ಸೋರಿ ಹೋಗಿರುವ ದೆವ್ವದ ಮಿಸ್ಟರಿ ಕಥೆಗಳು, ಪವಾಡದ ವಿವರಗಳ್ಯಾವೂ ಇದರಲ್ಲಿರುವುದಿಲ್ಲ. ಈ ಶೋನಲ್ಲಿ ಅವರು ತೋರಿಸಬೇಕೆಂದಿರುವುದು ಇಷ್ಟೇ: ಬಾಲಿವುಡ್ಡು, ಸ್ಯಾಂಡಲ್ ವುಡ್ಡಿನ ಎಲ್ಲಾ ನಾಯಕ, ನಾಯಕಿಯರನ್ನು ತೋರಿಸುವುದು. ಅದೂ ಮೇಕಪ್ಪು, ವಿಗ್ಗುಗಳು ಇಲ್ಲದೇ!
ಮತ್ತೊಂದು,‘ ದಿ ಗ್ರೇಟ್ ಗಾಡ್ ಫಾದರ್’! ಇದು ಬಿಗ್ ಬ್ರದರ್ ಶೋನಿಂದ ಪ್ರೇರಿತವಾದದ್ದು ಎಂಬುದು ಸಾಮ್ರಾಟರ ಕಾಲೆಳೆಯುವವರ ಕೀಟಲೆಯಾದರೂ ಇದರಲ್ಲಿ ಹೊಸ ಚಿಂತನೆಯಿದೆ. ಒಂದು ಬಹು ಎತ್ತರದ ಬೇಲಿ ಇರುವ, ಒಮ್ಮೆ ಒಳ ಹೊಕ್ಕವರು ಹೊರಗೆ ಬರದಷ್ಟು ಭದ್ರವಾಗಿರುವ ಕಟ್ಟಡದಲ್ಲಿ ನಾಡಿನ ಹೆಸರಾಂತ ರಾಜಕಾರಣಿಗಳನ್ನೆಲ್ಲಾ ಹಾಕಿಬಿಡುವುದು. ಅರವತ್ತು, ಎಪ್ಪತ್ತು, ಎಂಭತ್ತು ಎಂದು ವಯಸ್ಸು ಹಾಗೂ ತೂಕದಲ್ಲಿ ತೂಗುತ್ತಿರುವವರ ನಾಯಕರನ್ನು ಕೆಮರಾಗಳ ಕಣ್ಗಾವಲಿನಲ್ಲಿ ಸೇರಿಸುವುದು. ಪಕ್ಷ ಬೇಧವಿಲ್ಲದೆ ಅರ್ಹತೆಯಿರುವವರನ್ನೆಲ್ಲಾ ಆರಿಸುವುದು. ಸತತ ಎರಡು ವರ್ಷಗಳ ಕಾಲ ಅವರ ಚಲನವಲನಗಳನ್ನೆಲ್ಲಾ ಗಮನಿಸುತ್ತಿರುವುದು. ಇದರಲ್ಲೇನು ಸ್ಪೆಶಾಲಿಟಿ ಇದೆ ಅಂತೀರಾ? ಇದಕ್ಕೂ ಬಿಗ್ ಬಾಸ್ ನಂತಹ ಶೋಗೂ ವ್ಯತ್ಯಾಸವಿಲ್ಲ ಎನ್ನುತ್ತೀರಾ? ಸಾಮ್ರಾಟರ ಉಪಾಯವನ್ನು ತಾಳ್ಮೆಯಿಂದ ಕೇಳಿ, ಎರಡು
ವರ್ಷ ಹೀಗೆ ಕಾರ್ಯಕ್ರಮ ನಡೆಸಿದ ನಂತರ ಸದ್ದಿಲ್ಲದೆ ಎಲ್ಲಾ ಕೆಮರಾಗಳನ್ನು ಆಫ್ ಮಾಡಿ ಆ
ಕಟ್ಟಡದ ಕಾಂಪೌಂಡಿನ ಬಾಗಿಲನ್ನು ಶಾಶ್ವತವಾಗಿ ಮುಚ್ಚಿ ಕೀಲಿಕೈಯನ್ನು ನಾಶ
ಮಾಡಿಬಿಡುವುದು! ಆಗ ಅದು ದೇಶವೇ ಕೊಂಡಾಡುವ ರಿಯಾಲಿಟಿ ಶೋ ಆಗಿಬಿಡುತ್ತದೆ!
ತಮ್ಮ ಐಡಿಯಾಗಳನ್ನು ಯಾರೂ ಕದಿಯಬಾರದೆಂದು ಸಾಮ್ರಾಟರು ಅವನ್ನು ಪೇಟೆಂಟ್ ಮಾಡಿಸಲು ಮುಂದಾಗಿದ್ದಾರೆ. ಕಾಪಿ ಮಾಡುವವರೂ ಪೇಟೆಂಟ್ ದಕ್ಕುವ ಮೊದಲೇ ಪ್ರಯತ್ನಿಸಬೇಕಾಗಿ ಸೂಚನೆ!
ಪ್ರತಿಕ್ರಿಯೆ (1)