ಎಂಕ್ಟೇಸಪ್ಪ: ನಮಸ್ಕಾರ ಅಡ್ಬಿದ್ದೆ, ಮುನ್ಯಪ್ನೋರ್ಗೆ. ದೊಗ್ನಾಳ್ ಮುನ್ಯಪ್ಪಾರ್ ಆಸೀರ್ವಾದ ತಗಳ್ದೆ, ನಾವು ಮುಂದ್ವರ್ಯಕ್ಕಾಗತದಾ; ವಸಿ ನೀವೇ ಏಳಿ ! ನನ್ಗಿಂತ ಎಂಟ್ ವರ್ಸ ಹಿರೇರು ಅಲ್ವ್ರ ತಾವು ! ಅಲ್ಗೆ, ಓಗಕ್ಕಿಂತ ಮೊದ್ಲು ಬರ್ಬೇಕಾಗಿತ್ತು. ಏನೋ ಯಾವ್ದು ಸರ್ಯಾಗ್ ತಿಳೀವಲ್ದು... ಎಲ್ಲಾ ಸೌಖ್ಯವೇ ? ಈರಮ್ಮಾರ್ ಎಂಗವ್ರೆ ? ....ನಾಗೇಶ ಹೇಗಿದಾನೆ ?

ಮುನ್ಯಪ್ಪಾರು : ಏನೋ ಇಂಗಿದೀನಿ ; ನೀವೇ ನೋಡ್ತಿದೀರಲ್ಲ. ಎಲ್ಲ ಸಿವ್ನಿಚ್ಚೆ. ನಮ್ದೇನೈತಪ್ಪ. ಎಲ್ರು ಅವ್ರವ್ರ್ ಮಟ್ಟಿಗೆ ಚೆಂದಾಗವ್ರೆ. ಆದ್ರೆ ಕೆಲವ್ರ ನಡ್ವಳ್ಕೇಲಿ ಏನೂ ಸುದಾರ್ಣೆನೇ ನನ್ಗೆ ಕಾಣ್ಸ್ತಿಲ್ಲಪ ಎಂಕ್ತೇಸಣ್ಣ. ಅದ್ಸರಿ. ನೀನೇನೋ ವಿದೇಸಕ್ಕೆ ಓಗಿದ್ದೆ ಅಂತ, ಮಲ್ಲಣ್ ನಿಂದ ತಿಳೀತು. ಏನ್ ಸಮಾಚಾರ ಎಲ್ಲೆಲ್ಲಿ ಓಗಿದ್ದೆ. ನಂಗೊಂದ್ ಮಾತ್ ತಿಳ್ಸ್ಬೋದಾಗಿತ್ತಲ್ಲಪ್ಪ. ಏಳು. ಪರ್ವಾಗಿಲ್ಲ. ಗ್ರುಅಸ್ತಿ, ಅದೂ ಇದು ಇರ್ತೂತಲ್ಲ. ಗೊತ್ತಾತ್ ಬಿಡಪ್ಪ. ಉ.... ಏಳು. ಸರೋಜಮ್ಮರು ಉಸಾರಾಗಿದರೇನಪ ? ಪ್ರಕಾಸಣ್ಣ ಎಂಗವ್ನೆ.... ನಮ್ ಗ್ಯಾಪ್ಕ್ರ ಏನಾರಾ ಐತಾ ಎಂಗೆ ?

ಎಂಕ್ಟೇಸಪ್ಪ: ನಿಮ್ ಆಸೀರ್ವಾದ್ ದಿಂದ ಎಲ್ರು ಸರಿಯಾಗಿ ವಾಪಸ್ ಬಂದ್ವಿ. ಸ್ವಲ್ಪ ಅಲ್ಲಿ ಇಲ್ಲಿ ಎಡ್ವಟ್ ಆಗಿತ್ತು. ಸುದಾರ್ಸ್ಕೊಂಡ್ವಿ. ಪ್ರಕಾಶ, ಈರವ್ವಾರ್ನ ಯಾವಾಗ್ಲೂ ಗ್ಯಾಪಿಸ್ಕೊಂಡ್ತಾನೆ. ಚಿಕ್ಕೋನಾಗಿದ್ದಾಗ, ಅವ್ವಾರು ತೊಡೇ ಮ್ಯಾಗೆ ಮಲ್ಗಸ್ಕೊಂಡು ನೊರೆ ಅಸ್ವಿನಾಲು ಕುಡ್ಸಿದ್ದು ಅವ್ನ್ ಮರ್ತಿಲ್ಲಕಣಪ್ಪ. ನಿಮ್ಮನೇಲ್ ಮಾಡಿದ್ ಗಿಣ್ಣ, ಮಾಲ್ದಿ ಯೆಂಗ್ ಮರ್ಯಕ್ಕಾಗ್ತದೆ ನೀನೇ ಏಳಪ್ಪ.

ನಮ್ಗೇ ಕೊನೆಗಳ್ಗೆ ತನ್ಕ ಏನೊ ಆತಂಕ ಇದ್ದೇ ಇತ್ತು ನೋಡ್ರಿ. ವೀಸಾ ಸಿಗೋವರ್ಗೆ, ಜೀವ್ದಲ್ಲಿ ಜೀವಿಲ್ಲ. ಪ್ರಕಾಷ ಹಗ್ಲೆಲ್ಲಾ ಲೆಟರ್ ಮ್ಯಾಲೆ ಲೆಟರ್ ಬರ್ಯೋನು. ಎಲ್ಲಾ ಸುಲ್ಬ. ನೀವ್ ಮನ್ಸ್ ಮಾಡಿದ್ರೆ ಎಲ್ಲಾ ಊವ್ನಂಗೆ ಆಗೋಯ್ತದೆ. ಅಂದ. ಎಂಗೊ ನಿಮ್ಮಂತ ದೊಡ್ಡೋರ್ ಆಸೀರ್ವಾದ ಎಲ್ಲ ಸುಸೂತ್ರವಾಗ್ ನಡ್ದೋಯ್ತು. ಓಗಿದ್ದೂ ಆತು, ಬಂದಿದ್ದೂ ಆತು.

ಮುನ್ಯಪ್ಪಾರು : ಏ ನಿನ್ ಏಳೊದೇನು. ನಮ್ ಮಾದೇವ, ಇಲ್ವಾ. ಅದೇ ಕೊಟ್ಗೆ ತಿಪ್ಪೆ ಈಸಿರಪ್ಪನ್ ಮಗ ಮಹದೇವಪ್ಪ, ಓಗಿಬಂದು ಆಗ್ಲೇ ಇಪ್ಪತ್ತೆಳ್ಡ್ ದಿನ ಆತಪ. ಅದೇನ್ ಈಗ ಮೊದಲ್ನಂಗೆ ಕಶ್ಟ ಇಲ್ಲ. ಯಾರಾದ್ರು ಅಲ್ಲಿದ್ದು ಸರ್ಯಾಗಿ ಗೈಡ್ ಮಾಡ್ಬೇಕ್ ಅಷ್ಟೇಯ.

ಎಂಕ್ಟೇಸಪ್ಪ : ತಗಳಿ. ಅಲ್ಲಿನ್ ಚಾಕ್ಲೇಟು, ಈ ಇ- ಫೋಟೊ ಫ್ರೇಮ್, ನಿಮ್ಗೊಸ್ಕರ ತಂದಿದಿನಿ. ಮಡಕ್ಕೊಳ್ಳಿ.

ಮುನ್ಯಪ್ಪಾರು : ಏ ಇವೆಲ್ಲಾ ಯಾಕ್ ತರಕ್ಕೋದಪ್ಪ. ನಿನೊಳ್ಳೆ. ಸರಿಬಿಡು. ಇಸ್ವಾಸ ಇಟ್ಕಂಡ್ ತಂದುದಿಯ. ಆದ್ರೆ. ಇ ಪೊಟೊ ಪ್ರೇಮ್ಗೆ, ಕಂಪ್ಯೂಟರ್ ಬೇಕಲ್ಲಪ್ಪ. ನಾನ್ ಯಾಕೋ ಅದ್ರಕಡೆ ಮನಸ್ ಕೊಟ್ಟಿಲ್ಲ. ನಾಗೇಸಂದ್ ಬಾರಿ ಪ್ರೆಸರ್ರು. ಅಗ್ಲೆಲ್ಲಾ ಅಜ್ಜ ತನ್ನಿ ಅಂತಾನೆ. ಇ ಊರ್ನಾಗೆ ಕರೆಂಟೇ ಇಲ್ಲ. ಯಾವಾಗ್ ಬರ್ತುದೋ ಓಗ್ತುದೋ ಗ್ಯಾರಂಟಿ ಇಲ್ಲಲ್ಲಪ್ಪ. ಸರಿ, ಫಾರಿನ್ ಚಾಲೇಟ್ ಅಂದ್ರೆ, ಬಲಿಷ್ಟ ಅವನಿಗೆ. ಎಲ್ಲೋ ಒರ್ಗೆ ಓಗವ್ನೆ. ಬಂದ್ ಕೂಡ್ಲೆ ಕೊಡ್ತೀನಿ. ನಂಗ್ ಅಲ್ಲಾಗಲ್ಲಪ್ಪ. ಅವಳ್ಗೂ ಅಷ್ಟಕ್ಕಷ್ಟೆ.

ಎಂಕ್ಟೇಸಪ್ಪ: ನಮಸ್ಕಾರ ಈರವ್ವಾರ್ಗೆ. ಚನ್ನಾಗಿದೀರ.

ಈರವ್ವರು : ಅದೇ ಏಳ್ತಿದ್ರು. ನೀವೆಲ್ಲಾ ಫಾರಿನ್ಗೊಗಿದೀರ ಅಂತಾವ. ಎಲ್ರೂ, ಸರೋಜಮ್ಮಾರು, ಪ್ರಕಾಶಪ್ಪ, ರವಿಯಣ್ಣ. ಚೆಂದಾಗಿದಿರೇನಪ.

ಎಂಕ್ಟೇಸಪ್ಪ: ಮನ್ನೆ, ೧೮ ಕ್ಕಕ್ಕೆ ಬಂದ್ವಿ. ಎಲ್ಲ ಚಮ್ದಾಗಿದಿವಿ. ಅವ್ವರೆ. ಇದ್ನ ಕೊಟ್ಟೋಗಾನ ಅಂತ್ ಬಂದೆ. ಸರಿ. ಮತ್ ಬರ್ತೀನಿ. ಇನ್ನೂ ಬಾರಿ ಮಾತೋಡೈತೆ. ಅವ್ರ್ರತ್ರ.

ಈರವ್ವರು : ಕಾಪಿ ಕುಡ್ಕಂಡ್ ಓಗಪ.

ಎಂಕ್ಟೇಸಪ್ಪ: ಸರಿ. ಕೊಡ್ರಿ. ಇಷ್ಟ್ ಬೇಗ ಮಾಡಿದಿರಿ.

ಈಗ ನಾವು ಚಾ ಬಿಟ್ಟಿದಿವಿ. ಯಾಕೊ ಪಿತ್ತಕಣಪ. ಮೈಗೆ ಒಗ್ಗಿಬರ್ಲಿಲ್ಲ. ಸಕ್ರೆ ಸಾಕೇನಪ ?

ಎಂಕ್ಟೇಸಪ್ಪ: ಸರ್ಯಾಗೈತ್ರಿ. ಈ ತರ್ಹ ಚಾ ಕುಡ್ ಬಾಳಾ ದಿನಆಗಿತ್ರಿ., ಅವ್ವರೆ. ಮನೇಗೆ ಕಾಫಿ ಅಲ್ವ್ರಾ, ಕುಡ್ಯಾದು. ಅದೇ ಅಭ್ಯಾಸ ಆಗೋಗದೆ. ಬರ್ಲಾ ನಾನು. ಮುನ್ಯಪ್ಪಾರೆ. ನಿಮ್ ಅತ್ರ ಅದು ಇದು ಮಾತಾಡಾದು ಭಾಳ ಇದೆ.

ಮುನ್ಯಪ್ಪಾರು : ಸರಿಕಣಪ. ಏನೋ ಇಷ್ಟ್ ಇಸ್ವಾಸ ಇಟ್ಕಂಡ್ ಬಂದೆ. ವಸಿ ಪುರ್ಸತ್ತಾಗಲ್ವಾ ಬರೋದು. ಸರಿ. ಓಗು. ನಿಮ್ ಅಮ್ರೆಕದ್ ರಾಜ್ಕೀಯ ಇಚಾರ್ಸ್ಕೊಳ್ಳಾದು ಇನ್ನೂ ಬಾರಿ ಐತೆ. ನಾನೂ ಒಲದ್ಕಡೆ ಒಂಟೆ. ಏಂಡೆ ಒಡ್ಯೊ ಕೆಲ್ಸ ಸುರುಮಾಡಿದಾನ ಯೆಂಗೆ ನೋಡ್ಕಂಡ್ ಬರ್ತೀನಿ. ಸರಿ ನೀನೋಗು.

-ಚಿತ್ರ. ಸಿಯಾಟಲ್ ಐತಲ್ಲಾ, ಅಲ್ಲಿನ ಅಡವಿನಾಗಿ ಭಾರಿ-ಭಾರಿ ಎತ್ರದ ಮರಗಿಡಗಳು ಬೆಳೆದು ನಿಂತವೆ. ಅಲ್ತೆಗೆದಿದ್ದು ಈ ಪೊಟೊನ. ಈ ಜೊತೆಗಾರ್ರು ನಮ್ಗೆ ಅಲ್ಲೇ ಸಿಕ್ಕಿದ್ದು.