ಅರಿವೆನಗೆ
ತಿಳಿವೆನಗೆ
ಒಳವೆನಗೆ
ಗೆಲುವೆನಗೆ ಕಣ್ಣಿಗೆ ಕಂಡಂತೆ
ಸಾದನೆಗೆ ಕೊನೆಯುಂಟೆ
ಜಗವೆನಗೆ
ಸೊಗಮೆನಗೆ
ವಿಧಿಯೆನಗೆ
ಶ್ರೀ ಎನಗೆ
ಸ್ಪರ್ಶಕೆ ಸಿಕ್ಕಂತೆ
ಬದುಕಿಗೆ ಸಾವುಂಟೆ
ಗುರುವೆನಗೆ
ಗುರಿಯೆನಗೆ
ಜೊತೆಯೆನಗೆ
ಸರಿಯೆನಗೆ
ಕಿವಿಯು ಕೇಳ್ವನ್ತೆ
ಜೀವಕೆ ಸಾವುಂಟೆ
ನಮ್ಮೊಳಗೆ
ನಿಮ್ಮೊಳಗೆ
ಜಗದೊಳಗೆ
ಜನರೊಳಗೆ
ಇರುವ ಒಂದಂಶ
ನಡೆನೀನ್ ಎಂಬುದ್ಘೋಶ
ಹರೀಶ್ ಆತ್ರೇಯ
ಯಾರಿಗೂ ಕಾಣದೆ ಎಲ್ಲರೊಳು ಇರುವ ಒಂದೇ ಒಂದು ಶಕ್ತಿ ಪ್ರೋತ್ಸಾಹಿಸುವಿಕೆ
ನಿನ್ನಂದ ಅದು ಸಾಧ್ಯ ಹಿಂದಿರುಗದಂತೆ ಮುಂದೆ ನಡಿ ಬೆದ್ದರೂ ಅಡ್ಡಿಯಿಲ್ಲ ಗುರಿಯೇ ನಿನ್ನ ಗುರು
ಎಂದು ಪ್ರೋತ್ಸಾಹಿಸಿ ಬದುಕಿನ ಕೊನೆಯವರೆಗೂ ನಿಮ್ಮನ್ನು ಅಭಿಮಾನಿಸುತ್ತಾನೆ ಇದೆ ಶಕ್ತಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!