ಮೌನ ಮಾತಿನ ನಡುವೆ
ಬೆಳ್ದಿಂಗಳ ಹುಡುಗಿ
ಅಚ್ಚರಿಯ ಕಂಗಳ ಹೊತ್ತು
ನೋಡುತ್ತಿದ್ದಾಳೆ ಈ ಹೊತ್ತು
ಬಸ್ಸಿನ ತುಂಬೆಲ್ಲ ಮಾತು
ಅಲ್ಲಲ್ಲಿ ಮೌನ
ಮಾತು ಕೇಳುತ್ತಾಳೆ
ಅವಳೇ ಮಾತಾದಾಗ
ನಗುತ್ತಾಳೆ
ಚಂದುಟಿಯ
ಸಂಜೆಗೆಂಪಿನ ಹುಡುಗಿ
ಮೆಲು ಮಾತಿನ
ಮಿಂಚು ಕಂಗಳ ಬೆಡಗಿ
ಮಿಕ್ಕಂತೆ ಮೌನ ಗೌರಿ
ಮಾನಸ ಮಂದಿರದ
ಕಾವ್ಯ ಕನ್ನಿಕೆ
ನಗೆ ಮಲ್ಲಿಗೆಯ
ಚೆಲ್ಲಿ ಬಂದಾಳೋ
ಚಂದ್ರ ಚಂದ್ರಿಕೆ
ಮುಗ್ಧತೆಯ ಮೂರ್ತ ರೊಪ
ಸತ್ಯ ಸುಂದರ ಪ್ರೇಮಾಲಾಪ
ಶುಭ್ರ ನಿರ್ಮಲ ಹೃನ್ಮನ
ಆತ್ಮ ಬ್ರಹ್ಮನ ಜಾಣ್ತನ
ನಿಜ ಸ್ವಪ್ನ ನಿಜ ಸ್ವಪ್ನ
ಹರೀಶ್ ಆತ್ರೇಯ
ಆಫೀಸಿನ ಬಸ್ಸಿನಲ್ಲಿ ಕಂಡ ಹೊಸ ಮುಖ (ನ್ಯೂ ಜೋಯ್ನೀ) ಹೆದರಿಕೆ ಮತ್ತು ಬೆದರು ಕಂಗಳು ಬಹುಶಃ ಮೊದಲ ಕೆಲಸ ಇದಾಗಿರಬಹುದು ಮುಗ್ಧತೆಯ ಮುಖ ಕಂಡಾಗ ತೋಚಿದ್ದು ಮತ್ತು ಗೀಚಿದ್ದು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!