ನನ್ನ ನೆರಳು ಹಗಲು ಇರಳು
ಬೆನ್ನ ಹಿಂದೆ ಇರುವುದು
ಜೀವವಿದ್ದು ಹೋದಮೇಲೂ...
ನನ್ನ ಜೊತೆಗೆ ಬರುವುದು
ದೇಹಕುಂಟು ನೋವು ಮನಕು
ನೆರಳಿಗಿಲ್ಲ ಅದರ ಮರಗು
ಜೀವ ಹೋದ ಮೇಲೇ ಮರಣ
ನೆರಳಿಗಿಲ್ಲ ಕೊನೆಯ ಪಯಣ
ಜಾತಿಭೇದವಿಲ್ಲ ನಿನಗೆ
ಎಲ್ಲರಲ್ಲೂ ಬಂದೆ ಕೆಳಗೆ
ಜೀವ ಮಾತ್ರವಿಲ್ಲ ನಿನಗೆ
ನಿನ್ನ ಒಳಗೂ ನಾನೇ ಕೊನೆಗೆ
ನನ್ನ ಮಾತು ನಿನ್ನ ಮೌನ
ಕಪ್ಪು ಮಾತ್ರ ನಿನ್ನ ಬಣ್ಣ
ಹಣೆಯಬರಹ ಅಳಿಸಲಿಲ್ಲ
ನಿನ್ನ ಬಣ್ಣ ಅಳಿಸಿತೆ
ನನ್ನ ಕಾಯ್ವ ದೇವನೊಬ್ಬ
ನಿನ್ನರಾರು ಕಾಯ್ವರೋ
ಜೀವವಿರುವವರೆಗೂ ಕಾಯ್ವೆ ನಿನ್ನ
ಹೋದ ಮೇಲೆ ಯಾರು ಕಾಯ್ವರೋ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!