ಕಾಡುವವನು ನೀನೆ ನೀಡುವವನು ನೀನೆ
ಕಾಡಿದರೆ ಕಾಡು ನೀಡಿದರೆ ನೀಡು ನಾ ನಿನ್ನ
ದೂಡುವವನಲ್ಲ ಪ್ರಭುಶಂಕರ
ಹುಟ್ಟಿರುವೆ ಭೀಮನಮಾವಾಸ್ಯೆಯಂದು
ಇಟ್ಟಿರುವೆ ಮನದಲ್ಲಿ ಶಿವನ ಪೆಸರನ್ನು
ಕೊಟ್ಟಿರುವ ಎನ್ನ ಪೆಸರೆ ಪ್ರಭುಶಂಕರ
ಗುರಿಯಿಲ್ಲದ ಗುರು ಹೊಲ್ಲ ಇರಿಯುವ ನುಡಿ ಹೊಲ್ಲ
ಅರಿವಿಲ್ಲದ ಬಾಳು ಹೊಲ್ಲ ಜರಿಯುವ ನಡೆ ಹೊಲ್ಲ
ಹರನಿಲ್ಲದ ಗುಡಿ ಹೊಲ್ಲ ಪ್ರಭುಶಂಕರ
ಹೊಗಳುವರೆಲ್ಲಾ ಗೆಳೆಯರಲ್ಲ ತೆಗಳುವರೆಲ್ಲಾ ಕೀಳರಲ್ಲ
ಹೆಗಲೇರಿ ತೆಗಳಿ ತಿಳಿಹೇಳುವವನೇ ನಿಜವಾದ
ಹೊಂಗೆಳಯ ಪ್ರಭುಶಂಕರ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!