ಕಣ್ಣೆತ್ತರ ಮುಗಿಲೆತ್ತರ
ಮೇಲೇರಲಿ ಕನಸು
ಅಡಿಗಡಿಗೆ ಬದುಕೆಡೆಗೆ
ಹಾಸಲಿ ಹೂಹಾಸು
ಪನ್ನೀರಿನ ಸಿಂಚನದಿ
ತೋಯಲಿ ಮನಸೆಲ್ಲಾ
ನೀನಾಡುವ ನಿನ್ನಾಟಧಿ
ಗೆಲುವೇ ನಿನಗೆಲ್ಲಾ
ಕಡಲಾಳದ ರತ್ನದಂತೆ
ನುದಿಮುತ್ತುಗಳಿರಲಿ
ಒಡಲಾಳದ ಭಾವದಂತೆ
ಮೈ ಮನಗಳಿರಲಿ
ಪ್ರೇಮದೂಟೆ ಚಿಮ್ಮಿ ಬರಲಿ
ಹೃದಯಾಂತರಾಳದಿಂದ
ಸ್ನೇಹಗಂಗೆ ಹರಿದು ಬರಲಿ
ಮನಸಿನಾಳದೊಳಗಿಂದ
ಗೆಳತಿಗೆ
ನಿನ್ನೊಲವಿನ ಚೆಲುವನಿಗೆ
ನೀ ಬದುಕಾಗಿರು
ಅವನ ಪ್ರೀತಿ ಸೋನೆಗೆ
ನೀ ಮಳೆಬಿಲ್ಲಾಗಿರು
ಕಾಲೇಜಿನ ಕೊನೆಯ ದಿವಸ ಆಟೋಗ್ರಾಪ್ ಪುಸ್ತಕಗಳಲ್ಲಿ ಬರೆದು ಕೊಟ್ಟ ಸಣ್ಣ ಹನಿಗಳು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!