ಮಿಸುಕಾಡುತಿದೆ
ಒಳಗಿನ ಜೀವ
ಅಳುತ್ತಿದೆಯೇನೋ?
ಹಸಿವಾಗಿರಬೇಕು
ಕೈಕಾಲಾಡಿಸುತ್ತಿದೆ
ತಿರುಗುತ್ತಿದೆ
ಸೇರಲೋಲ್ಲದು ಊಟ
ಇದೆನಿದರ ಆತ
ಆದರೂ
ಸೇರಿಸಿಕೊಂಡು ತಿನ್ನುತ್ತೇನೆ
ನಮಗಾಗಿ
ನೋವಿದೆ ಕಣ್ಣಲ್ಲಿ ನೀರು
ಬಿಗಿಯಾಗಿದ್ದೇನೆ
ಹಲ್ಕಡಿದು, ಕಣ್ಮುಚ್ಚಿ
ಒಂದೆರಡು ಗಂಟೆ
ಒಳಗಿನ ಜೀವ
ಹೊರಬಂದರೆ ಸಾಕು
ಮುಕ್ತಿ
ನನಗೆ ಕಂಡಂತೆ ಪ್ರಸವ ವೇದನೆ ಸಂತಸ ಭಯ ನೋವು ಎಲ್ಲ ಭಾವಗಳನ್ನೂ ಹೇಳುತ್ತದೆ ದಿನವೂ ನನ್ನಕ್ಕನ ಮುಖವನ್ನು ನೋಡುತ್ತಾ ಅವಳಿಗೆ ಕಥೆಗಳನ್ನು ಹೇಳುತ್ತ ಸಂತೋಷಪಡಿಸುತ್ತ ಇರುತ್ತಿದ್ದೆ ಆದರೆ ಆದಿನ ಮರೆಯಲಾರದ ದಿನ ಆಸ್ಪತ್ರೆಯಲ್ಲೇ ಹೊಳೆದ ಸಾಲುಗಳು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!