ಬಣ್ಣದ ಬುಗುರಿ ಚೆಂದದ ಬುಗುರಿ
ತಿರುಗಿಸಲು ನೀ ಕಾಣುವೆ ಸುಂದರ
ನಿನ್ನ ಆಟ ಚಿಣ್ಣರ ಪಾಲಿಗೆ ಸಂತಸದ ಆಟ
ನನ್ನ ಪಾಲಿಗೆ ದೇವರು ಆಡಿಸುವ ಜೀವನದಾಟ
ಗಂಧದ ಮರದಿ ಬಂದರೂ ನೀನು
ಚೆಂದದಿ ಬಡಿಗನು ಕೆತ್ತಿದರೆನು
ಆಡಿಸುವವನ ಕೈಯಲ್ಲಿದೆ ನಿನ್ನಯ ಆಟ
ಮೇಲಿರುವವನ ಕೈಯಲ್ಲಿ ನಮ್ಮ ಜೀವನದಾಟ
ಬಂದೆಯೊ ಬೆತ್ತಲೆ ತಿರುಗಲು ಬೆತ್ತಲೆ
ಚಾಟಿಯ ಬಟ್ಟೆಯು ಕ್ಷಣಕಾಲ
ಹೊರಗಡೆ ಬಟ್ಟೆ ಹಾಕಿದರೆಷ್ಟು
ಅಜ್ಞಾನದ ಕತ್ತಲೆಯೊಳಗೆ ನೀ ಮನುಜ
ಯಾವ ಬಣ್ಣ ಬಳೆದರು ನೀನು
ತೋರಿಸುವೆ ಒಂದೇ ಬಣ್ಣವನು
ಎಷ್ಟೇ ಕಲೆತರೂ ನಾವು
ಕಷ್ಟದಲಿ ತೋರಿಸುವೆವು ನಿಜ ಗುಣವನ್ನು
ತಿರುಗುವೆ ನೀನು ಕ್ಷಣಕಾಲವಾದರು
ಸಂತಸ ತುಂಬುವೆ ಅಪಾರ
ಬಾಳಿನ ಬೇಸಿಗೆಯಲಿ ಬೇಯುವ ನಾವು
ಸಂತಸ ಪಡುವೆವು ಕ್ಷಣಕಾಲ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!