ನರೇ೦ದ್ರ

ಕಡಲ್ ಕಡಲ್ ಅವನ ಹೃದಯ.

ಮುಗಿಲ್ ಮುಗಿಲ್ ಅವನ ಚಿತ್ತ.

ಸಿಡಿಲ್ ಸಿಡಿಲ್ ಅವನ ವಾಕ್ಯ.

ಮುಗುಳ್ ಮುಗುಳ್ ಅವನ ಮುಖವು.

ಮಿಗಿಲ್ ಮಿಗಿಲ್ ಅವನ ತತ್ತ್ವ.

ಭುಗಿಲ್ ಭುಗಿಲ್ ಅವನ ಹೆಜ್ಜೆ.

ಹದುಳು ಹದುಳು ಅವನ ದಾಸ್ಯ.

- ಮುರಳಿ