ಮದ್ಯಾಹ್ನ ನನ್ನ ಮಗಳು ಶಟಲ್ ಕಾಕ್ ಆಡುತಿದ್ದಳು . ಇನ್ನೂ ಸರಿಯಾಗಿ ಆಡಲು ಬರುವುದಿಲ್ಲ
ನಾನು ಕೂತ್ಕೊಂಡು ಹುರಿದುಂಬಿಸುತ್ತಿದ್ದೆ,
ಕೆಲಸದ ಹುಡುಗಿಪುಷ್ಪಾಳ ಜೊತೆ ಆಟ ಆಡುತಿದ್ದಳು.
ಯಶೂ ಸರಿಯಾಗಿ ಬ್ಯಾಟ್ ಹಿಡ್ಕೊ
ಸರ್ವ್ ಸರಿಯಾಗಿ ಮಾಡು
ನಾನು ಹೇಳಿಕೊಡುತ್ತಿದ್ದೆ
ಅವಳೂ ಹೇಳಿಕೊಟ್ಟದ್ದನ್ನ ಮಾಡಲು ಪ್ರಯತ್ನಿಸಿ ಸೋಲುತಿದ್ದಳು.
"ಯಶೂ ಸರ್ಯಾಗಿ ಹೊಡೀಬೇಕು ಈಗ ನೀನು" ಅಂತ ಹೇಳ್ತಾನೆ ಇದ್ದಂತೆ ತಲೆ ಮೇಲೆ ದಪ್ಪೆಂದು ಏಟು ಬಿತು.
ನೋಡಿದರೆ ಯಶಿತಾ ನನ್ನ ತಲೆ ಮೇಲೆ ಸರಿಯಾಗಿಯೇ ಹೊಡೆದಿದ್ದಾಳೆ.
"ಏ ಯಾಕೆ ಹೊಡೆದೆ"
"ನೀನೆ ಹೇಳಿದ್ಯಲ್ಲ ಸರಿಯಾಗಿ ಹೊಡಿ ಅಂತ" ಅಂದಳು
ತಿಳಿಯದೇ ಮಾಡಿದಳೋ ಬೇಕೆಂದೇ ಮಾಡಿದಳೊ ಗೊತ್ತಾಗ್ಲಿಲ್ಲ
ಅವಳಿಗೆ ಆಟ ಹೇಳಿಕೊಡೋ ಸಹವಾಸಾನೆ ಬೇಡ ಅಂತ ತೆಪ್ಪಗೆ ಎದ್ದು ಬಂದೆ.
ಅಬ್ಬಾ ಇನ್ನೂ ಪೆಟ್ಟು ಹಾಗೆ ಇದೆ.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!