ಸುಮಾರು ೨೫ ವರ್ಷಗಳ ಕೆಳ್ಗೆ ನಮ್ಮಕ್ಕಳು ಕೇಳ್ತಿದ್ದ ಇದೇ ರೀತಿಯ ಸ್ವಾಭಾವಿಕವಾದ ಪ್ರಶ್ನೆಗಳಿಗೆ, ನನ್ ಹೆಂಡ್ತಿ ಅವರನ್ನ ರಮಿಸಿ ಉತ್ತರ ಕೊಡ್ತಿದ್ಲು. "ಇಲ್ಲ ಪುಟ್ಟಾ... ಪ್ರತಿದಿನ ಯಾರ್ ಹಾಸ್ಗೆ ಮಾಡ್ಸ್ತಾರೆ,’ ”ಯಾರಾದೄ ಕರೆದಾಗ ಅವ್ರು ಬಂದು ಮಾಡ್ಕೊಡ್ತಾರೆ.’ ’ಸರಿ, ಮೊದ್ಲು, ಯೂನಿಫಾರಮ್ ಕಳ್ಚಿ, ಮತ್ತೆ, ’ಹೋಗಿ..ಹೋಗಿ ಕೈಕಾಲ್ ತೊಳ್ಕೊಂಡ್ ಬನ್ನಿ ಊಟ ಮಾಡಿಸ್ತೀನಿ."...
ನಿನ್ನೆ ಮನೆಹತ್ರ, ಹಾಸ್ಗೆ ಮಾಡೋನು ಟೊಂಯ್ ಶಬ್ದ ಮಾಡ್ತಾ ಬಂದ. ಆಗ ನನಗಾದ ಒಂದು ಹಳೆಯ ನೆನಪನ್ನು ನಿಮ್ಮೆಲ್ಲರೊಡನೆ ಹಂಚಿಕೊಳ್ಳಲು ಯತ್ನಿಸುತ್ತಿದ್ದೇನೆ. ಮತ್ತೆ ತಲೇಲಿ ಅದೇ ನೆನಪಿನ ಸುರಳಿಗಳು ಗೋಳುಹೊಯ್ಯಿಕೊಳ್ಳುತ್ತಿವೆ. ನಮ್ಮನೆ, ಪಕ್ಕದ ಸ್ವಾಮಿ ತಮ್ಮ ಮನೆಲಿದ್ದ ಹಳೆ-ಹತ್ತಿನ ಶುದ್ಧಿಮಾಡಿಸಿ, ಹಾಸಿಗೆ ಹೊಲಿಸಲು ಕರೆದಿದ್ದರು. ನಾನೂ ಅದೆಷ್ಟ್ ಸರಿ, ಹಳೆ-ಹಾಸಿಗೆಗಳನ್ನ, ಚಿಕ್ಕದನ್ನ್ ದೊಡ್ದು ಮಾಡ್ಸೊದು, ಇಲ್ದಿದ್ರೆ, ದೊಡ್ದನ್ನ ಚಿಕ್ಕದ್ ಮಾಡ್ಸೋದು, ಇದ್ರಲ್ಲೇ ಸಾಕುಸಾಕಾಗಿ ಹೋಗಿದೆ. ಮೊದಲು, ನಮ್ಮ ಎರಡನೇ ಮಗೆ ಹುಟ್ಟಿದಾಗ, ನಮ್ಮಣ್ಣ, ಹಾಗೂ ಅಮ್ಮ, ಬೆಂಗ್ಳೂರ್ ನಿಂದ, ನಾವೆಲ್ಲಾ ಚಿಕ್ಕೋರಾಗಿದ್ದಾಗ ಮಲಗಿಕೊಳ್ಳುತ್ತಿದ್ದ ತೊಟ್ಟಿಲನ್ನು ಅಂಚೆಯಲ್ಲಿ ರವಾನಿಸಿದ್ದರು. 'ಇದನ್ನೇ ಉಪಯೋಗಿಸು, ಖಂಡಿತಾ ಮಗೀನ ಬೇರೆ ಎಲ್ಲೂ ಮಲಗಕ್ಕ್ ಬಿಡ್ಬ್ಯಾಡಿ', ಅಂತ ಸುಮಾರು ಒಂದ್ (ಹತ್ತು) ಸಾವಿರಸಾರಿ ಕಾಗದ ಬರೆದಿದ್ದರು. ಆ ತೊಟ್ಟಿಲು ಸಾಮಾನ್ಯವಾದದ್ದೇನಲ್ಲ. ನಮ್ಮ ಅಣ್ಣ, ಮತ್ತು ನಮ್ಮ ೭ ಜನ ಹಿರಿಯಣ್ಣಂದಿರು ಅದ್ರಲ್ಲಿ ಮಲಗಿ, ಅತ್ತು, ನಕ್ಕು, ನಮ್ಮ ಅಮ್ಮ-ಅಪ್ಪನ್ನ ಕಾಡಿಸಿ, ಗೋಳಿಸಿ, ಸಂಭ್ರಮಿಸಿದ್ದರು. ಅದರಲ್ಲಿ ನನ್ನ ಹೆಸರೂ ಇದೆ. ನಾಲ್ಕ್ ಜನ ಉಳ್ಕೊಂಡ್ವಿ. ಇನ್ನ್ ನಾಕ್ ಜನ ದೇವ್ರ್ ಪಾದ ಸೇರ್ಕೊಂಡ್ರು, ಅಂತ ಹೇಳೋವಾಗ ನಮ್ಮಮ್ಮನ ಕಣ್ಣಿನಂಚಿನಲ್ಲಿ ಬಂದ ಕಣ್ಣಿರನ್ನ, ಅವರ ಸೀರೆ ಸೆರಗ್ನಲ್ಲಿ ಒರೆಸ್ಕೊಳ್ಳೋ ದೃಷ್ಯ, ನಮ್ಮ ಹೃದಯವನ್ನು ಕರಗಿಸುತ್ತಿತ್ತು. ಅಯ್ಯೋ, ಅಮ್ಮನ್ ಕಣ್ಣಲ್ಲಿ ನೀರು ಬರೋದು, ಅಂದ್ರೇನು ? ?
ಅಯ್ಯೊ, ಎಲ್ಲಿಂದೆಲ್ಗೋ ಹೊರ್ಟೋದೆ, ಸಾರಿ. ಆ ಭಾರಿ ಮೆಟಲ್ ತೊಟ್ಲಿಗೆ ಸರಿಹೋಗೋ ಅಂತಹ ಚಿಕ್ಕ ಚೌಕಾಕಾರದ ಹಾಸಿಗೆ ಇರಬೇಡವೇ ? ಆಗ ಹಳೆ ಹಾಸಿಗೆಗಳ್ನ,ಕೆಡಸಿ, ಒಂದ್ ಪುಟ್ಟ ಹಾಸಿಗೆ, ಇನ್ನೆರಡು ದೊಡ್ಡಹಾಸಿಗೆ ಮಾಡ್ಸಿದ್ದಾಯ್ತು. ನಾನು ಹತ್ತಿ ಖಾತೆನಲ್ಲಿ ಕೆಲ್ಸಮಾಡ್ತಿದ್ದೆ, ಅಂತ ಹೇಳಿದ್ದೆ. ನೆನಪಿರ್ಬೇಕಲ್ಲವಾ ? ಸ್ಟಾಫ್ ನೋರ್ಗೆ, ಎರಡ್ ವರ್ಷಕ್ಕೊಮ್ಮೆ, ೨೨ ಕಿಲೋ ಹತ್ತಿನಾ, ಬಹಳ ಕಡಿಮೆ ರೇಟ್ ನಲ್ಲಿ ಕೊಡ್ತಾ ಇದ್ರು. ಅಂದ್ರೆ, ಕಿಲೋ ಹತ್ತಿಗೆ, ೨೫ ರಿಂದ ೩೦ ರೂಪಾಯಿನ ತನಕ. ಬಝಾರ್ ನಲ್ಲಿ ಹತ್ತಿ-ಬೆಲೆ, ಇದರ ಎರಡರಷ್ಟು ಇರ್ತಿತ್ತು.
ಈ ಹತ್ತಿ , ಸ್ಯಾಂಪಲ್ ಹತ್ತಿ. ಅಂದ್ರೆ, ಪಾರ್ಟಿಗಳು ಟೆಸ್ಟಿಂಗ್ ಗೆ ಕಳಿಸ್ತಾರಲ್ಲ, ಅದು....ಎಲ್ಲ ಟೆಸ್ಟ್ ಆದ್ಮೇಲೆ, ಅದನ್ನ ಹಾಗೆ ಗೋಡೋನ್ ನಲ್ಲಿಟ್ಟಿದ್ದು, ವರ್ಷದ್ ಕೊನೆಯಲ್ಲಿ ’ಆಕ್ಷನ್ ,’ ಮಾಡ್ತಿದ್ರು. ಹತ್ತಿಮಾತ್ರ ಅತಿ ಶುದ್ಧವಾಗಿರ್ತಿತ್ತು. ಗಿಡ್ದಿಂದ ಹುಶಾರಾಗಿ ಕಿತ್ತು ಚೀಲ್ದಲ್ ತುಂಬಿ, ನಮ್ಮ ಲ್ಯಾಬ್ ಗೆ ಟೆಸ್ಟಿಂಗೆ ಬರ್ತಿತ್ತು.
ಮೊದ್ಲು, ಹಳೆಹಾಸ್ಗೆ-ಹತ್ತಿನ, ಹೊರಗ್ ತೆಗ್ದು, ಅದನ್ನ ಪಿಂಜಾರಿನಲ್ಲೋ ಅಥವಾ ಮಿಶಿನ್ ನಲ್ಲೋ ಓಪನ್ ಮಾಡಿ ಶುದ್ಧಿಮಾಡಿ, ಹೊಸದಾಗ್ ಹೊಲ್ಸಿರೋ ಹೊಸ ಬಟ್ಟೆನಲ್ಲಿ ತುಂಬಿ ’ಟಾಕ,’ ಹಾಕ್ತಾರೆ, ಮತ್ ಹೊಲಿತಾರೆ. ಇದು, ನೋಡಕ್ಕೆ ಸುಲಭವಾಗಿ ಕಂಡ್ರು, ಇದರಹಿಂದಿನ ಪರಿಶ್ರಮ ಬಹಳ ಹೆಚ್ಚು. ನಮ್ಮ ಮಕ್ಳು ಸ್ಕೂಲ್ ನಿಂದ ಬಂದ್ಮೇಲೆ, ಯೂನಿಫಾರ್ಮ್ ನೂ ಬಿಚ್ಚದೆ, ಊಟಾನೂ ಮಾಡ್ದೆ, ಬಿಟ್ಟ್ ಕಣ್-ಬಿಟ್ಕೊಂಡ್, ಆ ’ಟೊಂಯ್-ಟೊಂಯ್,’ ಶಬ್ದಾನ ಆಲಿಸಿ, ಕುಶಿಪಡೊ ದೃಷ್ಯನ, ಮರೆಯಕ್ಕ್ ಸಾಧ್ಯವೇ ?
ಏನ್ ಮಹಾ ವಿಷ್ಯ ಅದು ? ಹತ್ತಿ ಕ್ಲೀನ್ ಮಾಡೋದು, ಅದನ್ನ್ ಹೊಸಬಟ್ಟೆಲಿ ತುಂಬೋದು, ಹಾಸ್ಗೆ ರೆಡಿ ! ಆದ್ರೆ, ನಮ್ಮ ಮಕ್ಳ ಆ ಬೆರಗುಕಣ್ಣಿನ ಪ್ರದರ್ಶನ ಮಧ್ಯೆ ಮಧ್ಯದಲ್ಲಿ ಬಾಲಸಹಜಪ್ರಶ್ನೆಗಳ ಸುರುಮಳೆ ಎಷ್ಟ್ ಚೆನ್ನಾಗಿತ್ರಿ ! ನನ್ನ್ ಹೆಂಡ್ತಿ, ಕೊನ್ಗೆ ಬೇಜಾರಾಗಿ, ’ಹೋಗ್ರೊ, ಹತ್ತಿವಿಷ್ಯ ನಂಗೇನ್ ಗೊತ್ತು ; ನಿಮ್ಮಪ್ಪನ್ ಕೇಳ್ಕೊಳ್ಳಿ. ನಾನ್ ನಿದ್ದೆ ಮಾಡ್ಬೇಕು, ನನ್ನ ಬಿಡಿ ,’ ಅನ್ನೋಳು; ನಾನ್ ೬ ಗಂಟೆಗೆ ಬರೋದೆ, ಸಮಯ ಕಾದಿದ್ದು, ’ರಾಪಿಡ್ ಫೈರ್ ಸೆಶನ್,’ ಪ್ರಾರಂಭ ಆಗ್ತಿತ್ತಪ್ಪ. ಅದೇನ್ ಮಜ ಸಿಕ್ತಿತ್ತು, ಅದ್ರಲ್ಲಿ. ಹಿಂದೆ, ಒಂದ್ ದಿನ ಆಯಪ್ಪ ಬರ್ದಿದ್ರೆ, ಟೊಂಯ್ ಟೊಂಯ್ ಮಾಡ್ತಾ ಬರ್ತಿದ್ನಲ್ಲಮ್ಮ ಅವ್ನ್ಯಾಕ್ ಬರ್ತಿಲ್ಲಾ ಅಂತ ತನ್ನ ನಕ್ಷತ್ರದ ಕಣ್ಣ್ಗಳ್ನ ಅಗಲವಾಗಿ ಹಿಗ್ಗಿಸಿ, ಥಳ ಥಳಿಸ್ತಾ ಪ್ರಶ್ನೆ ಮಾಡೊ ಹುಡುಗರು ನೋಡಿ, ಈಗ ಎಷ್ಟ್ ಕೆಟ್ಟೋಗಿದಾರೆ ? [ಕೆಟ್ಟೋಗಿದಾರೋ, ಎತ್ತರಕ್ ಬೆಳ್ದಿದಾರೋ ...ಹೇಳೋದ್ ಕಷ್ಟ.. ಬಿಡಿ ]
ಆ ಟೊಂಯ್ ಶಬ್ದ, ಈಗ ಕೇಳಿಸ್ಕೊಂಡಾಗ ನಮ್ಮ ಮಗ, ಯಾಕ್ ಅಷ್ಟೊಂದ್ ಜೋರಾಗ್ ಶಬ್ಧ ಮಾಡ್ತಾನ್ ಆಯಪ್ಪ.. ? ಅಂತ ಕೇಳ್ಬಿಡೋದೆ. ಸರಿಹೋಯ್ತು. ... ನೀನು ಚಿಕ್ಕವನಾಗಿದ್ದಾಗ........ ಮತ್ತೆ ಅದೇ ಡೈಲಾಗ್ ಹೇಳ್ಬೇಡಿ ಅಪ್ಪ..... ವಾಗ್ವಾದ ನಮ್ಮೆಲ್ಲರ ಜೊತೆ, ಶುರು..... !!!!
ಈ ದೈತ್ಯಾಕಾರದ, ನಮ್ಮೆಲ್ಲರ ಪ್ರೀತಿಯ ನಮ್ಮಪ್ಪನವರಕಾಲದ ತೊಟ್ಟಿಲು, ಈಗಲೂ ಬಹಳ ಮಜ್ಬೂತಾಗಿದೆ, ಸೊಗಸಾಗಿದೆ. ಅದನ್ನ ನಮ್ಮಣ್ಣನವರ ಮನೆಯ ಅಟ್ಟದ ಮೇಲೆ ಇತ್ಟೀದೀವಿ. ಇದನ್ನ ನಮ್ಮಪ್ಪ ಬೊಂಬಾಯ್ ನಲ್ಲಿದ್ದಾಗ, ಖರೀದ್ಸಿದ್ರಂತೆ. ಅಂದ್ರೆ, ೧೯೨೫ ರಲ್ಲಿ, ಹಾ... ಅದ್ರಲ್ಲೇ ಹೋದ್ವರ್ಷ, ನಮ್ಮ ಅಣ್ಣನವರ ಮೊಮ್ಮಗಳು, 'ಗೌರಿ ಯ ಬರ್ತ್ ಡೇ ,’ ಆಯ್ತಲ್ವಾ ? ಬಹುಶಃ ಮೂರ್ ಜನ ಮಕ್ಕಳು, ಅರಾಮವಾಗಿ ಅದರಲ್ಲಿ ಮಲಗಬಹುದು. ಕೈಕಾಲು ಅಲ್ಲಾಡಿಸಲು ಕಸ್ಟವಾಗುವುದಾದರೆ, ಎರಡು ಮಕ್ಕಳಂತೂ ಮಜವಾಗಿ ಮಲಗಬಹುದು. ಮತ್ತೆ ಹೊರಳಾಡಲೂಬಹುದು !!!!!!!
-ವೆಂ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!