ಚೀನೀ ಅಮೆರಿಕನ್ನರು ಅಮೆರಿಕದ ಜನಜೀವನದ ಮುಖ್ಯ ವಾಹಿನಿಯಲ್ಲಿ ಬೆರೆತುಹೋಗಿದ್ದಾರೆ. ಅವರ ಕೊಡುಗೆ ಅಪಾರ. ಹೋಟೆಲ್ ಉದ್ಯಮದಲ್ಲಿ ಮತ್ತು ಇನ್ನೂ ಹಲವಾರು ಕ್ಷೇತ್ರಗಳನ್ನು ಅವರು ಅಮೆರಿಕವನ್ನು ದಕ್ಷತೆಯಿಂದ ಪ್ರತಿನಿಧಿಸುತ್ತಿದ್ದಾರೆ. ಚೀನೀ ಅಮೆರಿಕನ್ನರ ಜನಸಂಖ್ಯೆಯೂ ಸಾಕಾದಷ್ಟಿದೆ. ಅಮೆರಿಕದ ಪ್ರತಿರಾಜ್ಯದ ದೊಡ್ಡ ದೊಡ್ಡ ಶಹರುಗಳಲ್ಲಿ, ಅವರು ತಮ್ಮದೇ ಆದ ರೀತಿಯಲ್ಲಿ, ವಾಸ್ತವ್ಯವನ್ನು ಹೂಡಿದ್ದಾರೆ. ಸ್ಯಾನ್ ಫ್ರಾನ್ಸಿಸ್ಕೊ ನಗರದಲ್ಲಿ, ’ಚೈನ ಟೌನ್,’ ಇದೆ. ಅದರಬಗ್ಗೆ, ನಮ್ಮ ಟ್ರಾವೆಲ್ ಗೈಡ್, ಮಿಸ್ ಕಿಟ್ಟೀ, ತನ್ನ ಬಾಡಿಲ್ಯಾಂಗ್ವೇಜ್, ಹಾಗೂ ಬೆರಗುಕಣ್ಣುಗಳಿಂದ, ಅಮೋಘವಾಗಿ ವರ್ಣಿಸಿದ್ದಳು. ಅವಳಿಗೆ, ಬೇರೆ ಎಲ್ಲಾ ಅಮೆರಿಕನ್ನರ ತರಹ, ’ಚೈನೀಸ್ ಫುಡ್,” ಭಾರಿ ಇಷ್ಟವಂತೆ ! ಇದೇ ತರಹ, ಅಮೆರಿಕದ ಪ್ರತಿರಾಜ್ಯ, ಮುಖ್ಯನಗರಗಳಲ್ಲಿ ಚೈನಿ ಅಮೆರಿಕನ್ನರು, ಸಾಮೂಹಿಕವಾಗಿ ವಾಸಿಸುತ್ತಾರೆ. ವಿಶ್ವದ ಪ್ರಮುಖ ಶಹರುಗಳಲ್ಲೆಲ್ಲಾ, ಚೀನೀಯರು ವಾಸಿಸುತ್ತಿದ್ದಾರೆ.

ನಾವು ಸಿಯಾಟಲ್ ನಗರವನ್ನು ಇಡೀ-ದಿನ ಸುತ್ತಿದ್ದೆವು. ಎಲ್ಲರ ಬಾಯಿನಲ್ಲೂ, " ಸಾಯಂಕಾಲ ಸಿಯಾಟಲ್ ಪೆರೇಡ್ ಇದೆ. ಬೇಗರೆಡಿಯಾಗಬೇಕು," ಎನ್ನುವ ಸಂಭ್ರಮ, ಎದ್ದು ಕಾಣುತ್ತಿತ್ತು. ಪೆರೇಡ್ ನಲ್ಲಿ, ನಗುಮುಖದ ಸಧೃಢ ಮೈಕಟ್ಟಿನ, ಅಂದ-ಚೆಂದದ ಹುಡುಗ ಹುಡುಗಿಯರ, ಪೋಶಾಕು ಅತ್ಯಂತ ಆಕರ್ಷಕವಾಗಿತ್ತು. ಅವರ ನಡೆಯುವ ಭಂಗಿ ಸೊಗಸಾಗಿತ್ತು. ಅಮೆರಿಕನ್ ಜನಜೀವನದಲ್ಲಿನ ಹೆಚ್ಚುವರಿ ವಿಶೇಷಗಳನ್ನು ಭವ್ಯವಾಗಿ ಸಜಾವಟ್ ಮಾಡಿ ನಡೆಸಿಕೊಟ್ಟ, ರಸ್ತೆಯಲ್ಲಿ ಓಡಾಡುತ್ತಾ ನಡೆಸಿದ ಪ್ರದರ್ಶನ, ಬೊಂಬಾಟಾಗಿತ್ತು ! ನಗರದ ’ ದ ಸೌತ್ ವೆಸ್ಟ್ ಏರ್ಲೈನ್ಸ್,’ ನವರು, ಆಯೋಜಿಸಿದ್ದ ವಾರ್ಷಿಕ, ಪೆರೇಡ್ ನಲ್ಲಿ ಅಮೆರಿಕನ್ನರೆಲ್ಲ ತಮ್ಮ ತಮ್ಮ ’ಟ್ಯಾಬ್ಲಾಯಿಡ್ ಪ್ರದರ್ಶನ,’ ಅದ್ಧೂರಿಯಾಗಿ ಪ್ರದರ್ಶಿಸಲ್ಪಟ್ಟಿತ್ತು. ಅದನ್ನು ನಾವು ಎಲ್ಲರಂತೆ, ರಸ್ತೆಯ ಫುಟ್ಪಾತ್ ನಲ್ಲಿ ಕುಳಿತಿದ್ದು, ಸುಮಾರು, ೫-೬ ಗಂಟೆಗಳ ಕಾಲ ಕಾದಿದ್ದು, ವೀಕ್ಷಿಸಿದೆವು. ’ಡ್ರಾಗನ್ ಆಧಾರಿತ ಪ್ರದರ್ಶನ,’ ನಿಜಕ್ಕೂ ಅಲ್ಲಿದ್ದ ಸಾವಿರಾರು ಪ್ರೇಕ್ಷಕರ ಮನಸ್ಸನ್ನು ಮೋಡಿಮಾಡಿತ್ತು. ಸುಮಾರು, ೧೦ ಯುವಕರ, ಮಿಂಚಿನಂತೆ ಓಡುತ್ತಾ, ’ ಬೃಹತ್ ಡ್ರಾಗನ್ ಆಕೃತಿ, ’ ಯನ್ನು ಸವಾರಿಸುತ್ತಾ, ಒಬ್ಬರಾದಮೇಲೆ ಒಬ್ಬರಂತೆ, ಸರದಿಯಲ್ಲಿ ಅದರ ಗತಿಯನ್ನು ನಿಯಂತ್ರಿಸುತ್ತಾ , ಒಂದೇ ಸಮನೆ ಎಡೆಬಿಡದೆ ಮಾಡುತ್ತಿದ್ದ ’ಡ್ರಾಗನ್ ಕವಾಯತ್, ” ಒಂದು ಅದ್ಭುತ ನೋಟವಾಗಿತ್ತು !

ಇದೇತರಹ, ನಮ್ಮ ಅಮೆರಿಕದ ಸಿಖ್ ಸಮುದಾಯವೂ, ಅತ್ಯಂತ ಸೊಗಸಾಗಿ ಪ್ರದರ್ಶನವನ್ನು ನಡೆಸಿಕೊಟ್ಟು, ಅಲ್ಲಿ ನೆರೆದಿದ್ದ ಎಲ್ಲ ಮಕ್ಕಳ, ಹಿರಿಯ-ಕಿರಿಯರ ನಾಗರಿಕ ವೃಂದಗಳ, ಕಣ್ಮಣಿಗಳಾಗಿ ಶೋಭಿಸಿದ್ದರು.

-ಚಿತ್ರ. ವೆಂ.