ಗೆಳೆಯ ನನ್ನ ಕಣ್ರೆಪ್ಪೆ ಮುಚ್ಚುವ ಮುಂಚಿನ ಕ್ಷಣದಿ
ನೀನಿದ್ದೆ , ಕಣ್ತೆರೆದಾಗ ನಾ ಕಾಣಲಿಲ್ಲ ನಿನ್ನ

ತೀರದ ಎಡರುಗಳು ಬಂದೆರೆಗಿದಾಗ ರಕ್ಷ್ತೆಯಂತೆ
ನೀನಿದ್ದೆ, ಎಡರು ಮುಗಿದಾಗ ನೀ ಕಾಣಲಿಲ್ಲ

ಜಗವೆಲ್ಲ ಶತೃವಾಗಿ ಬೇಡೆನಿಸಿದಾಗ ಮಿತ್ರನಂತೆ
ನೀನಿದ್ದೆ, ಜಗದೆಲ್ಲರೂ ಮಿತ್ರರಾದಾಗ ನೀ ಹೋದೆ ಎಲ್ಲಿ

ಬಾಳೆಲ್ಲಾ ಕತ್ತಲ್ಲೆಯಾಗಿ ಕಣ್ ಕಾಣದಾಗ ಬೆಳಕಂತೆ
ನೀನಿದ್ದೆ, ಬಾಳೆ ಹುಣ್ಣಿಮೆಯಾದಾಗ ನೀ ಮರೆಯಾದೆ

ಅಡ್ಡದಾರಿ ಹಿಡಿದು ಹಾದಿ ತಪ್ಪುವಾಗ, ತಂದೆಯಂತೆ
ನೀನಿದ್ದೆ, ಬಾಳಗುರಿ ತಲಪುವಾಗ ನೀನೆಲ್ಲಿ ಹೋದೆ

ದೀಪವಾಗದೆ ನೀ ಕರ್ಪೂರವಾದೆ ಬೆಳಕನೀಯುತಲೆ ನೀ ದೂರವಾದೆ
ಹಗಲಿರುಳು ನಾ ಹಚ್ಚುವೆ ದೀಪವ ನಿನ್ನ ನೆನಪಲ್ಲೇ