ಈ ಸಲ ಪದ್ಮಶ್ರೀ ಗೌರವ ಪಡೆದ ಈರ್ವರು ನನ್ನೂರಿನವರೇ ಅನ್ನುವುದೊಂದು ವಿಶೇಷ. ಮೊದಲನೆಯವರು ___LINK_OPEN_href="http://uni.medhas.org/unicode.php5?file=http%3A%2F%2Fudayavani.com%2Fshowstory.asp%3Fnews=0%26contentid=616106%26lang=2" target="_blank" title="ಉದಯವಾಣಿ"___ಬನ್ನಂಜೆ ಗೋವಿಂದಾಚಾರ್ಯ.
ಹೆಸರಿನಲ್ಲಿ ಬನ್ನಂಜೆ ಎಂದಿದ್ದರೂ ಇವರು ವಾಸವಾಗಿರುವುದು ಉಡುಪಿ ಹೊರವಲಯದ ಅಂಬಲಪಾಡಿಯಲ್ಲಿ. ಪ್ರವಚನಕಾರರಾಗಿ ಜನಪ್ರಿಯರಾಗಿರುವ ಬನ್ನಂಜೆಯವರು ವಿದ್ವಾಂಸರು,ವಿದ್ಯಾವಾಚಸ್ಪತಿ ಎಂಬ ಗೌರವಕ್ಕೆ ಪಾತ್ರರಾದವರು.
ಮತ್ತೊಬ್ಬರು ___LINK_OPEN_href="http://uni.medhas.org/unicode.php5?file=http%3A%2F%2Fudayavani.com%2Fshowstory.asp%3Fnews=0%26contentid=616107%26lang=2" target="_blank" title="ಉದಯವಾಣಿ"___ಬಿ ಆರ್ ಶೆಟ್ಟಿ.

ವಿದೇಶಕ್ಕೆ ತೆರಳುವ ಮೊದಲು ಎಪ್ಪತ್ತರ ದಶಕದಲ್ಲಿ ಉಡುಪಿಯಲ್ಲಿದ್ದಾಗ ಇವರಿದ್ದುದು ಅಂಬಲಪಾಡಿಯಲ್ಲಿ. ನಗರಸಭೆಯ ಉಪಾಧ್ಯಕ್ಷರಾಗಿದ್ದಾಗ ಅಂಬಲಪಾಡಿಯ ದೇವಸ್ಥಾನದ ಎದುರಿನ ರಸ್ತೆಗೆ ಡಾಮರೀಕರಣವನ್ನು ತಾವೇ ಮುತುವರ್ಜಿ ವಹಿಸಿ ಮಾಡಿಸಿದ್ದಾಗಿ,ಕಳೆದ ವರ್ಷ ಸಮಾರಂಭವೊಂದರಲ್ಲಿ ಹೇಳಿಕೊಂಡಿದ್ದರು.
ನಾನಿರುವುದೂ ಅಂಬಲಪಾಡಿಯಲ್ಲಿ. ಹಾಗಾಗಿ ನನಗೆ ಈ ಸಲದ ಗಣರಾಜ್ಯೋತ್ಸವದ ಸಂದರ್ಭದಲ್ಲಿನ ಪ್ರಶಸ್ತಿಗಳು ಕೋಡು ಮೂಡಿಸಿವೆ ;)
ಪ್ರತಿಕ್ರಿಯೆ (4)