ಸಂಪದಿಗರೆ ಈ ಹಾಡನ್ನು ಭೀಮ್ಸೇನ್ ಜೋಶಿ ಯವರ ಭಾಗ್ಯದ ಲಕ್ಶ್ಮಿ ಬಾರಮ್ಮಾ ಧಾಟಿಯಲ್ಲಿ ಹಾಡಿಕೊಳ್ಳಿ..................

ಪಕ್ಕದ್ ಮನೆ ಹುಡುಗಿ ಬಾರಮ್ಮ...

ನಮ್ಮಮ್ಮಾ ಇಲ್ಲಾ..

ಪಕ್ಕದ್ ಮನೆ ಹುಡುಗಿ ಬಾರಮ್ಮ...  [ಪ]

ಅಕ್ಕ ಪಕ್ಕದ ಜನರನು ನೋಡುತ

ಹೆಜ್ಜೆಯ ಮೇಲೊಂದೆಜ್ಜೆಯ ನಿಕ್ಕುತಾ

ಶುಕ್ರವಾರದಿಯ ಚಿತ್ರಮಂಜರಿ

ಮರೆಯದೆ ನೀನು ನೋಡಲು ಬಾರೆ..

ಪಕ್ಕದ್ ಮನೆ ಹುಡುಗಿ ಬಾರಮ್ಮ     [1]

ಇಂದಿನ ಪೇಪರ್ ಓದಲು ಬಾರೆ

ಹೆಪ್ಪಿಗೆ ಮೊಸರನು ಕೇಳಲು ಬಾರೆ

ಕರೆಂಟು ಹೋದ ಸಮಯದಿ ನೇನು

ಕಡ್ಡಿ ಪೆಟ್ಟಿಗೆ ಕೇಳಲು ಬಾರೆ...

ಪಕ್ಕದ್ ಮನೆ ಹುಡುಗಿ ಬಾರಮ್ಮ     [2]

ಇಂದಿಗು ನಾನೆ ಎಂದಿಗು ನಾನೆ

ನಾನ ಜನ್ಮಕು ನಾನೆ ಬಾರೆ

ತಂದೆ ತಾಯಿತ್ಯು ಒಪ್ಪದಿದ್ದರೆ

ಸೂಟ್ ಕೇಸ್ ಹಿಡ್ಕೊಂಡು ಬಸ್ಟ್ಯಾಂಡ್ ಗೆ ಬಾರೆ..[3]



ಪ್ರೀತಿಯಿಂದ

ಗಿರಿ