ತಿರುಗಾಡುತ್ತಲೇ ಇದ್ದೇನೆ
ಜೋತೆಗಾರನಿಗಾಗಿ
ನನ್ನಾತ್ಮ ಸಾಂಗತ್ಯಕೆ
ಅವನೇ ಮೇರುಗಿರಿ
ಕಳೆದೆ ಹೋಗಿದ್ದಾನೆ
ನಿನ್ನೆಗಳ ನಡುವೆ
ಅವನಿದ್ದ ಬದುಕಿದ್ದ
ಹಸಿರಾಗಿ ಉಸಿರಾಗಿ
ನನ್ನೊಳಗೆ ಅವಿತಿದ್ದ
ಗುಪ್ತ ಗೆಳೆಯನಾಗಿ
ನೋವುಗಳ ಜೊತೆಗೆ
ನಲಿವಾಗಿ ಬಂದವನು
ಎಲ್ಲಿರುವನೋ?
ಬರುವನೋ ಬಾರನೋ
ಕಾಣದೆ ಕಂಗಾಲಾಗಿದ್ದೇನೆ
ಒಮ್ಮೆ ಬಂದುಬಿಡು ಗೆಳೆಯ
ನೀನಿಲ್ಲದೆ ನಾನಿಲ್ಲ
ಭಾವನೆಗಳೆಲ್ಲಾ ಒಳಸೇರಿ
ಹಿಂಡುತಿವೆ ಪ್ರಾಣ
ನಿನಗೂ ಹಂಚಿ
ಹಗುರಾಗುವೆ ಬಾ ಜಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!