ಆರ್ಥಿಕ ಹಿಂಜರಿತ ತೀವ್ರ ಪರಿಣಾಮ ಬೀರುತ್ತಿದೆ. ಆಟೋಮೊಬೈಲ್ ಕಂಪೆನಿಯವರು ತಮ್ಮ ಕಾರ್ಖಾನೆಯನ್ನೇ ಸ್ತಬ್ದಗೊಳಿಸಿದಾಗ ಅನಿವಾರ್ಯವಾಗಿ ಕಾರ್ಮಿಕರು ಕೆಲಸ ಕಳೆದುಕೊಳ್ಳಲೆಬೇಕಾಗುತ್ತದೆ. ಇದು ಬಹಳ ದುಃಖದ ಸಂಗತಿ. ಅಂತೆಯೇ ನಿನ್ನೆ ಟೈಮ್ಸ್ ಪತ್ರಿಕೆಯಲ್ಲಿ ಒಂದು ಪೋಲ್ ನಡೆಸಿದ್ದರು. ಇಂತಹ ಸಮಯದಲ್ಲಿ ಉದ್ಯೋಗ ಕಡಿತಕ್ಕಿಂತ ಸಂಬಳ ಕಡಿತ ಒಳ್ಳೆಯದು ಎಂಬುದು ನಿಮ್ಮ ಅನಿಸಿಕೆಯೇ ಎಂದು. ನಿರೀಕ್ಷಿತವಾಗಿ ಹಲವಾರು ಮಂದಿ ಸಂಬಳ ಕಡಿತಕ್ಕೆ ಒಲವು ತೋರಿಸಿದ್ದರು. ನನ್ನ ಅಭಿಪ್ರಾಯವೂ ಕೂಡ ಅದೇ ಆಗಿದೆ.

ನಿಮ್ಮ ಅಭಿಪ್ರಾಯವೇನು?