ಭದ್ರೆಯ ಬಾಗಿಲಲಿ ನಿಂತವಳು
ಅಬ್ಬರದ ಉಡುಗೆಯಿಲ್ಲ.
ಸ್ನೋ,ಪೌಡರಿನ ಸೋಂಕಿಲ್ಲ .
ತುಟಿಗಳಿಗೆ ಸಂಜೆ ರಂಗನು ತುಂಬಿ
ಕನಸು ಕಂಗಳ ಹೊತ್ತು ನಿಂತವಳು.
ತೇರ ತೀರಕೆ ಸೇತುವಾಗಿ
ಕವನದೊಳಗಿನ ಮಾತಾಗಿ
ನಗೆ ಬೆಳದಿಂಗಳ ಚೆಲ್ಲಿ
ನೋವ ಮರೆಸಲು ನಿಂತವಳು.
ಪ್ರೀತಿ ಸೋನೆಯಲಿ ನೆಂದು
ಪ್ರೇಮ ಗಂಗೆಯಲಿ ಮಿಂದು
ಒಲವ ದೋಣಿಯನೇರಿ
ಕಣ್ಣಲೆ ಕಥೆ ಹೇಳಲು ನಿಂತವಳು.
ಮುದ್ದು ಕೆನ್ನೆಯುಬ್ಬಿಸಿ
ಬಾ ತನ್ನೆದೆಯೊಳಗೆಂದು
ಕರೆಯಿತಿಹಳು ಕೈಬೀಸಿ
ಅದೇ ಹುಡುಗಿ
ಭದ್ರೆಯ ಬಾಗಿಲಲಿ ನಿಂತವಳು