ನಿನ್ನ ಕಣ್ಣ ಮುಂದೆ ಸುತ್ತಿದ್ದ
ಪಾತರಗಿತ್ತಿಗಾಗಿ ಕೈ ಚಾಚಿದ್ದ
ನೀನು...
ಮತ್ತೆ ಕೈಗೆ ಸಿಕ್ಕಾಗ ಮುತ್ತಿಕ್ಕಿ
ಮುದ್ದಿಸಿದ್ದೆ..
ಬಣ್ಣ ಬಣ್ಣದ ರೆಕ್ಕೆಗಳು
ನಿನ್ನ ಕಣ್ಣ ಸೆಳೆದಾಗ
ನಿನ್ನೆದೆಯ ಮಂಚದಲಿ
ಸ್ನೇಹ ಸಿಂಚನವ ಹರಿಸಿದವ..
ಮೈಯೆಲ್ಲಾ ಬೆರಳಾಡಿಸಿ
ರಸ ಹೀರಿದಾಗ ನನ್ನ
ಬಣ್ಣದ ಪುಟ್ಟ ರೆಕ್ಕೆಗಳ
ಕತ್ತರಿಸಿ ಬಿಸಾಕಿದ್ದೆ...
ರೆಕ್ಕೆ ಕಳೆದುಕೊಂಡ ಮೇಲೆ
ಪುಟ್ಟ ಹುಳು ನಾನು..
ತೆವಳಿ ನಿನ್ನೆಡೆಗೆ ಬಂದಾಗ
ಇನ್ನೊಂದು ಪಾತರಗಿತ್ತಿಗಾಗಿ
ನೀನಾಗಲೇ ಜಾಲ ಹೆಣೆಯುತಲಿದ್ದೆ!
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!