ಯಾವೊದೋ ಮಾತಿಗೆ
ಯಾವುದೋ ಉತ್ತರ
ತಿಳಿಯದಾಗಿದೆ ಹೀಗೇಕೆಂದು
ತಾಳಲಾರೆ ಈ ಮೌನ ಅಂತರ
ಬಿಡದೆ ಕಾಡುವ ನೆನಪು
ಒಂದಾಗಿ ತೇಲಿ ಬರುತಿದೆ
ದೂರ ಸರಿಸಲಾರೆ ಅದನು
ಮತ್ತೂ ಬೇಕೆನಿಸುತ್ತದೆ
ಎತ್ತಲೋ ಮುಖ ಮಾಡಿ
ನಿಂತು ಕಾಡುವೆ ಹೀಗೇಕೆ?
ಕನಸು ಕಾಣುವ ಕಂಗಳನು
ಕಾಣುವುದೆನ್ನ ಬಯಕೆ
ಯಾರದೋ ಮಾತಿಗೆ
ನಿನಗೆಕಿಷ್ಟು ಬೇಸರ
ನಿನ್ನೊಳಗೆ ನಾನಿರಲು
ಮತ್ತಿನ್ನೇಕೆ ಮುಜುಗರ
ಒಲವ ಸೂಸುವ ಕಣ್ಣೊಳಗೆ
ಹನಿಗಳೇಕೆ ನಿಂತಿದೆ
ಒಂದಾದ ಸಂತಸದಲಿ
ಮಾತೇಕೆ ಕಂದಿದೆ
ನಾನಿರುವೆ ಜೊತೆಗೆಂದು
ಮನಸಿನಾಳದಿ ನುಡಿದೆ
ನನಗಿಲ್ಲದ ಜಾಗವನ್ನು
ನನ್ನೀ ಮನದೊಳಗೆ ಪಡೆದೆ
ಮಲ್ಲಿಗೆಯ ಮೊಗ್ಗರಳಿ
ಪರಿಮಳವ ಸೂಸಿದೆ
ಮಾಲೆಯೊಂದು ನಿನ್ನ
ಮುಡಿಯೇರಲು ಕಾದಿದೆ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!